ಒಲಿಂಪಿಕ್ಸ್ ನಲ್ಲಿ ಅವಕಾಶ ಪಡೆಯುವ ಹಾದಿಯಲ್ಲಿ ಭಾರತದ ಆರ್ಚರಿ ತಂಡ

Update: 2019-06-12 12:41 GMT

ಡೆನ್ಬೋಸ್ಚ್(ನೆದರ್‌ಲ್ಯಾಂಡ್) ಜೂ.11: ಭಾರತದ ಪುರುಷರ ರಿಕರ್ವ್ ತಂಡ ವಿಶ್ವ ಆರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ನಾರ್ವೆ ವಿರುದ್ಧ 5-1 ಅಂತರದಲ್ಲಿ ಜಯ ಗಳಿಸಿದ್ದು, ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಒಲಿಂಪಿಕ್ಸ್‌ನಲ್ಲಿ ಅವಕಾಶ ದೃಢಪಡಿಸಲು ಇನ್ನೊಂದು ಗೆಲುವು ದಾಖಲಿಸಬೇಕಾಗಿದೆ.

ತರುಣ್‌ದೀಪ್ ರಾಯ್, ಪ್ರವೀಣ್ ಜಾಧವ್, ಅತಾನು ದಾಸ್ ನೇತೃತ್ವದ ತಂಡ ಬುಧವಾರ ನಡೆಯಲಿರುವ ಮುಂದಿನ ಸ್ಪರ್ಧೆಯಲ್ಲಿ ಕೆನಡಾದ ಎರಿಕ್ ಪೀಟರ್ಸ್, ಕ್ರಿಸ್ಪಿನ್ ಡ್ಯುನಾಸ್ ಮತ್ತು ನ್ರಿಯಾನ್ ಮ್ಯಾಕ್ಸ್‌ವೆಲ್ ಸವಾಲನ್ನು ಎದುರಿಸಲಿದೆ. 2020ರ ಟೋಕಿಯೋ ಒಲಿಂಪಿಕ್ಸ್‌ಗೆ ಮೂವರು ಅಥ್ಲೀಟ್‌ಗಳ ಕೋಟಾದಲ್ಲಿ ಅವಕಾಶ ಪಡೆಯಲು ಭಾರತದ ತಂಡ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಜಯಿಸಬೇಕಾಗಿದೆ.

ಭಾರತದ ಮಹಿಳಾ ತಂಡ ಒಲಿಂಪಿಕ್ಸ್‌ನಲ್ಲಿ ಅವಕಾಶ ಪಡೆಯವ ಹಾದಿಯಲ್ಲಿದೆ. ಈಗಾಗಲೇ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವ ಸುತ್ತು ಪ್ರವೇಶಿಸಿದ್ದು, ಬುಧವಾರ ದೀಪಿಕಾ ಕುಮಾರಿ, ಕೋಮಲಿಕಾ ಬಾರಿ, ಲೈಶ್ರಾಮ್ ಬೊಂಬೆಲಾ ದೇವಿ ನೇತೃತ್ವದ ಭಾರತದ ತಂಡ ಬೆಲಾರಸ್ ತಂಡವನ್ನು ಎದುರಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News