ಬೆಳೆಗಾರರಿಗೆ ಬಾಕಿ ಹಣ ಕೊಡದಿದ್ದರೆ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿಯುವ ಚಳವಳಿ

Update: 2019-06-12 17:58 GMT

ಬೆಂಗಳೂರು, ಜೂ.12: ಕಬ್ಬು ಬೆಳೆಗಾರರಿಗೆ ಬಾಕಿ ಹಣ ಹಾಗೂ ವೈಜ್ಞಾನಿಕ ಬೆಲೆ ನೀಡದಿದ್ದರೆ ಸಕ್ಕರೆ ಕೈಗಾರಿಕೆಗಳಿಗೆ ಬೀಗ ಜಡಿಯುವ ಚಳವಳಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ಅಖಿಲ ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ಗುರುಮಠ ತಿಳಿಸಿದ್ದಾರೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2013-14ರಿಂದ ಇಲ್ಲಿಯವರೆಗೆ ಎಫ್‌ಆರ್‌ಪಿ ಬೆಲೆಗೆ ಸೇರಿಸಿ ರಾಜ್ಯದ ಎಸ್‌ಎಪಿ ದರವನ್ನು ನಿಗದಿ ಮಾಡುವಲ್ಲಿ ವಿಫಲವಾಗಿದೆ. ಕಳೆದ ವರ್ಷದಿಂದ ಕಬ್ಬು ಬೆಳೆಗಾರರು ಬಾಕಿ ವಸೂಲಿಗಾಗಿ ಉಗ್ರ ಹೋರಾಟ ಮಾಡಿದರು ಸಹ ಇಲ್ಲಿಯವರೆಗೆ ಯಾವುದೆ ಪ್ರಯೋಜನವಾಗಿಲ್ಲ, ಅದರಿಂದ ಸರಕಾರಕ್ಕೆ ಒಂದು ವಾರ ಗಡುವು ನೀಡುತ್ತಿದ್ದೇವೆ, ಅಷ್ಟರಲ್ಲಿ ಬಾಕಿ ಹಣ ಬಿಡುಗಡೆ ಮಾಡಿಸದಿದ್ದರೆ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡೆಯಲಾಗುವುದು ಎಂದು ತಿಳಿಸಿದರು.

ಕರ್ನಾಟಕ ಸರಕಾರ ಜಿಂದಾಲ್ ಕಂಪನಿಗೆ 3,667 ಎಕರೆ ಭೂಮಿ ನೀಡುವುದಕ್ಕೆ ಹೊರಟಿರುವುದು ಸರಿಯಲ್ಲ, ಸರಕಾರ ಶ್ರೀಮಂತರಿಗೆ ರಾಜ್ಯವನ್ನು ಮಾರಾಟ ಮಾಡಿ ಮುಂದಿನ ದಿನಗಳಲ್ಲಿ ರೈತರನ್ನು ಜೀತದಾಳುಗಳನ್ನಾಗಿ ಮಾಡುವುದರಲ್ಲಿ ಸಂಶಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News