ಐಎಂಎ ಸಂತ್ರಸ್ತರನ್ನು ಮತ್ತೆ ಲೂಟಿ ಮಾಡುವ ಹೊಸ ಕುತಂತ್ರ !

Update: 2019-06-13 16:54 GMT

ಬೆಂಗಳೂರು, ಜೂ.13: ಐಎಂಎ ಸಂಸ್ಥೆಯ ಬಹುಕೋಟಿ ವಂಚನೆ ಪ್ರಕರಣದ ಬೆನ್ನಿಗೇ, ಸಂತ್ರಸ್ತರ ಅಸಹಾಯಯಕತೆಯನ್ನು ದುರುಪಯೋಗಪಡಿಸಿಕೊಂಡು ಸಂತ್ರಸ್ತರನ್ನು ಮತ್ತೆ ಲೂಟಿ ಮಾಡುವ ಹೊಸ ಕುತಂತ್ರವೊಂದರ ಬಗ್ಗೆ ಬೆಂಗಳೂರು ನಗರ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಐಎಂಎ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡ ಸಂತ್ರಸ್ತರಿಗೆ ಕರೆ ಮಾಡಿ ಬ್ಯಾಂಕ್ ಖಾತೆ ವಿವರಗಳನ್ನು ಪಡೆಯುತ್ತಿರುವ ಬಗ್ಗೆ ಎಚ್ಚರಿಸಿರುವ ಬೆಂಗಳೂರು ನಗರ ಪೊಲೀಸರು ಮೋಸದ ಕರೆಗಳ ಬಗ್ಗೆ ನಿಗಾ ವಹಿಸುವಂತೆ ಸೂಚಿಸಿದ್ದಾರೆ.

'ಐಎಂಎ ಸಮೂಹ ಕಂಪೆನಿಗಳಿಂದ ವಂಚಿತ ಗ್ರಾಹಕರ ಅಸಹಾಯಯಕತೆಯನ್ನು ದುರುಪಯೋಗಪಡಿಸಿಕೊಂಡು ವಂಚಕರು ಅವರ ಖಾತೆಗೆ ನೇರವಾಗಿ ಹಣವನ್ನು ವರ್ಗಾಯಿಸಿವುದಾಗಿ ದೂರವಾಣಿ ಮೂಲಕ ಕರೆಗಳನ್ನು ಮಾಡಿ ಆಮಿಷವೊಡ್ಡಿ, ಗ್ರಾಹಕರ ಬ್ಯಾಂಕ್ ಖಾತೆ ವಿವರ, ಐಎಫ್ಎಸ್ ಸಿ ಕೋಡ್, ಡೆಬಿಟ್ ಕಾರ್ಡ್ ಸಂಖ್ಯೆ, ಸಿವಿವಿ ಸಂಖ್ಯೆಗಳನ್ನು ನೀಡುವಂತೆ ಮಾಹಿತಿಯನ್ನು ಸಂಗ್ರಹಿಸಿ ವಂಚಿಸುವ ಪ್ರಯತ್ನಗಳು ನಡೆಯುತ್ತಿರುವುದು ಕಂಡು ಬಂದಿದ್ದು, ಗ್ರಾಹಕರು ಇಂತಹ ಯಾವುದೇ ಮೋಸದ ಕರೆಗಳಿಗೆ ತಮ್ಮ ಬ್ಯಾಂಕ್ ಮಾಹಿತಿಯನ್ನು ನೀಡದೆ, ಇಂತಹ ಕರೆಗಳ ಬಗ್ಗೆ ಎಚ್ಚರಿಕೆ ವಹಿಸಿ ಯಾರಿಗಾದರೂ ಸಂಶಯ ಉಂಟಾದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮಹಿತಿ ನೀಡಿದಲ್ಲಿ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News