ಡಿಎಸ್ ಮ್ಯಾಕ್ಸ್ ಕಲಾಶ್ರೀ ನ್ಯಾಷನಲ್ ಪ್ರಶಸ್ತಿಗೆ 13 ಮಂದಿ ಆಯ್ಕೆ

Update: 2019-06-14 16:55 GMT

ಬೆಂಗಳೂರು, ಜೂ.14: ಪ್ರಸಕ್ತ ಸಾಲಿನ ಡಿಎಸ್ ಮ್ಯಾಕ್ಸ್ ಕಲಾಶ್ರೀ ನ್ಯಾಷನಲ್ ಅವಾರ್ಡ್‌ಗೆ ಸಾಹಿತಿ ಡಾ.ದೊಡ್ಡರಂಗೇಗೌಡ, ಡಾ.ಹಂಸಲೇಖ ಹಾಗೂ ನಟ ದೇವರಾಜ್ ಸೇರಿದಂತೆ 13 ಸಾಧಕರು ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಕಾರ್ಯನಿರ್ವಾಹಕ ದಯಾನಂದ್ ತಿಳಿಸಿದ್ದಾರೆ.

ಶುಕ್ರವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿರಿಯ ನಟಿ ಭಾರ್ಗವಿ ನಾರಾಯಣ್, ಪದ್ಮಶ್ರೀ ಪುರಸ್ಕೃತ ಕಲಾ ಕೆ.ತಪಸ್ವಿ ವಿಶ್ವನಾಥ್, ನಟ ಕೆ.ಎಸ್.ರವಿಕುಮಾರ್, ಹಿರಿಯ ನಟಿ ಕಾಂಚನ, ನಟರಾದ ರವಿಕಿರಣ್, ರಮೇಶ್ ಭಟ್, ಮೇನಕಾ ಸುರೇಶ್ ಕುಮಾರ್, ಕುಕ್ಕು ಪರಮೇಶ್ವರನ್, ಹರ್ಷಿಕಾ ಪೂಣಚ್ಚ, ಐಶ್ವರ್ಯ ರಾಜ್ ಭಕುನಿ ಅವರನ್ನು ಡಿ.ಎಸ್.ಮ್ಯಾಕ್ಸ್ ಕಲಾಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ಡಿಎಸ್ ಮ್ಯಾಕ್ಸ್‌ನ 14ನೇ ವಾರ್ಷಿಕೋತ್ಸವ ಕಾರ್ಯಕ್ರಮ ಜೂ.19ರಂದು ಸಂಜೆ 3.30ಕ್ಕೆ ಅರಮನೆ ಮೈದಾನ ಶೀಷಮಹಲ್‌ನಲ್ಲಿ ನಡೆಯಲಿದ್ದು, ವಾರ್ಷಿಕೋತ್ಸವದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಗಳು 25 ಸಾವಿರ ರೂ. ನಗದು ಹಾಗೂ ಸ್ಮರಣಿಕೆಗಳನ್ನು ಒಳಗೊಂಡಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೃಹ ಸಚಿವ ಡಾ.ಎಂ.ಬಿ.ಪಾಟೀಲ್, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್, ಸಚಿವ ಪುಟ್ಟರಾಜು, ಬಂಡೆಪ್ಪಕಾಶೆಂಪೂರ್, ಮಾಜಿ ಸಚಿವರಾದ ಅರವಿಂದ್ ಲಿಂಬಾವಳಿ, ಡಿ.ರಾಜುಗೌಡ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಪಾಲ್ಗೊಳ್ಳಲಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News