ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕು: ಟಿ.ಸುನಿಲ್ ಕುಮಾರ್

Update: 2019-06-14 17:02 GMT

ಬೆಂಗಳೂರು, ಜೂ.14: ಠಾಣೆಗೆ ಸಮಸ್ಯೆ ಹೇಳಿಕೊಂಡು ಬರುವ ಹಿರಿಯ ನಾಗರಿಕರನ್ನು ಗೌರವದಿಂದ ಕಾಣಬೇಕೆಂದು ನಗರ ಪೊಲೀಸ್ ಆಯುಕ್ತ ಟಿ. ಸುನಿಲ್ ಕುಮಾರ್ ನುಡಿದರು.

ಶುಕ್ರವಾರ ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹೆಲ್ತ್‌ಏಜ್ ಇಂಡಿಯಾ ಸಹಯೋಗದಲ್ಲಿ ನಡೆದ ಹಿರಿಯ ನಾಗರಿಕರ ಶೋಷಣೆ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಯಸ್ಸಾದ ಪೋಷಕರನ್ನು ಸರಿಯಾಗಿ ನೋಡಿಕೊಳ್ಳುವುದು ಮಕ್ಕಳ ಕರ್ತವ್ಯ, ಆದರೆ, ಇತ್ತೀಚೆಗೆ ಪಾಲಕರನ್ನು ಮನೆಯಿಂದ ಹೊರಹಾಕಿ ಅಮಾನವೀಯವಾಗಿ ವರ್ತಿಸುವುದು ಹೆಚ್ಚಾಗುತ್ತಿದ್ದು, ಇಂತಹ ಸಮಸ್ಯೆಗಳನ್ನು ತೋಡಿಕೊಂಡು ಬರುವ ಹಿರಿಯರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕೆಂದು ಹೇಳಿದರು. ಜೀವನವಿಡೀ ಮಕ್ಕಳ ಭವಿಷ್ಯಕ್ಕೆ ಶ್ರಮಿಸುವ ಪಾಲಕರನ್ನು ಮಕ್ಕಳು ವಯಸ್ಸಾದ ನಂತರ ನಿರ್ಲಕ್ಷ್ಯ ತಾಳಿ ಅವರನ್ನು ಮನೆಯಿಂದ ಹೊರ ಹಾಕುವವರನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷಣ ತಜ್ಞೆ ಡಾ.ಗೀತಾ ರಾಮನುಜನ್ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News