ಓಪನ್ ಕರಾಟೆ ಚಾಂಪಿಯನ್‌ಶಿಪ್‌ ನಲ್ಲಿ ಮಕ್ಕಳ ಸಾಧನೆ

Update: 2019-06-14 18:11 GMT

ಬೆಂಗಳೂರು, ಜೂ.14: ಕೆನ್-ಇ-ಮಾಬುನ್ ಶಿಟೋ ರಿಯು ಕರಾಟೆ ಶಾಲೆಯ ಮಕ್ಕಳು ಸೌತ್ ಕೋರಿಯಾದಲ್ಲಿ ನಡೆದ 12ನೇ ಕೋರಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಮೂರು ಚಿನ್ನದ ಪದಕ, ಆರು ಬೆಳ್ಳಿ ಸೇರಿದಂತೆ ಒಟ್ಟು 18 ಪದಕಗಳನ್ನು ಪಡೆದುಕೊಂಡಿದ್ದಾರೆ ಎಂದು ತರಬೇತುದಾರ ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂತರ್‌ರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ಒಟ್ಟು 13 ರಾಷ್ಟ್ರಗಳು ಭಾಗವಹಿಸಿದ್ದವು. ನಮ್ಮ ಮಕ್ಕಳು ಒಟ್ಟು 18 ಪದಕಗಳು ಪಡೆಯುವ ಮೂಲಕ ಭಾರತ ಮೂರನೇ ಸ್ಥಾನ ತಂದುಕೊಟ್ಟಿದ್ದಾರೆ. ಇದು ನಮ್ಮ ಶಾಲೆ ಹಾಗೂ ನಮ್ಮ ತರಬೇತುದಾರರಿಗೆ ಬಹಳ ಹೆಮ್ಮೆಯ ವಿಷಯ ಎಂದರು.

ಮಕ್ಕಳ ಪೋಷಕರು ಮಾತನಾಡಿ, ಅನೇಕ ಅಂತರ್‌ರಾಷ್ಟ್ರೀಯ ಕಂಪನಿಗಳಿಂದ ಆಫರ್ ಬರುತ್ತಿವೆ. ಆದರೆ ಹಣಕಾಸಿನ ತೊಂದರೆಯಿಂದ ಸ್ಪರ್ಧೆಯಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಅದರಿಂದ ಮಕ್ಕಳಿಗೆ ಸ್ಥಳೀಯ ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಸರಕಾರ ಸಹಕಾರ ನೀಡಲು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News