ಅನುತ್ತೀರ್ಣರಾದರೆ ವಿದ್ಯಾರ್ಥಿಗಳ ಭವಿಷ್ಯ ಮುಗಿದಂತಲ್ಲ: ಅಬ್ದುಲ್ ಮುಶೀತ್

Update: 2019-06-16 16:38 GMT

ಬೆಂಗಳೂರು, ಜೂ. 16: ಯಶಸ್ಸು ಕೇವಲ ಅರ್ಹತೆಯಿಂದ ಬರುವುದಿಲ್ಲ. ಸತತ ಪ್ರಯತ್ನ ಹಾಗೂ ಮಾಡುತ್ತಿರುವ ಕೆಲಸಗಳಲ್ಲಿ ಕೇಂದ್ರೀಕೃತವಾಗಿರುತ್ತದೆ. ಅನುತ್ತೀರ್ಣರಾದ ಕೂಡಲೇ ವಿದ್ಯಾರ್ಥಿಗಳ ಭವಿಷ್ಯ ಮುಗಿದಂತಲ್ಲ ಎಂದು ವಿಯಾನ್ ಅಕಾಡಮಿ ನಿರ್ದೇಶಕ ಅಬ್ದುಲ್ ಮುಶೀತ್ ತಿಳಿಸಿದ್ದಾರೆ.

ಶೈಕ್ಷಣಿಕ ವೈಫಲತೆಗೆ ಒಳಗಾಗಿರುವ ವಿದ್ಯಾರ್ಥಿಗಳಿಗೆ ಸೂಕ್ತ ವಾತಾವರಣ ಸೃಷ್ಟಿಸಲು ನಾವು ಪ್ರಯತ್ನಿಸುತ್ತೇವೆ. ಅನುತ್ತೀರ್ಣ ವಿದ್ಯಾರ್ಥಿಗಳ ಸಾಮರ್ಥ್ಯ ಗುರುತಿಸಿ, ಅವರ ಪ್ರತಿಭೆಯನ್ನು ಪೋಷಿಸಿ, ಶಿಕ್ಷಣದ ಬಗ್ಗೆ ಕೇಂದ್ರೀಕರಿಸಲು ಪ್ರೇರೇಪಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಎಸೆಸೆಲ್ಸಿ, ಪಿಯುಸಿ ಫಲಿತಾಂಶ ಬಂದಾಗ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ಸಂತಸ ಕಂಡುಬಂದರೆ ಅನುತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ದುಃಖ-ದುಮ್ಮಾನ ತುಂಬಿರುತ್ತದೆ. ಹಾಗೆಂದು ಆ ವಿದ್ಯಾರ್ಥಿ ಶಿಕ್ಷಣದಿಂದ ದೂರ ಆಗಬೇಕಿಲ್ಲ ಎಂದು ಅವರು ಕಿವಿಮಾತು ಹೇಳಿದ್ದಾರೆ.

ಅಕಾಡಮಿಯು, ಎಸೆಸೆಲ್ಸಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ 2 ವರ್ಷದ ಪೂರ್ಣ ಅವಧಿ ಕಲಿಕೆಯ ಕಂಟಿನ್ಯೂಯಸ್ ಆ್ಯಂಡ್ ಕಾಂಪ್ರಹೆನ್ಸಿವ್ ಇವಾಲ್ಯೂಯೇಷನ್ ಪ್ರೊಗ್ರಾಮ್(ಸಿಸಿಇಪಿ) ಮತ್ತು ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ 3 ವರ್ಷದ ಪೂರ್ಣ ಅವಧಿಯ ಕಲಿಕೆಯ ಮತ್ತು ಗಳಿಕೆಯ ದೂರಶಿಕ್ಷಣ ಪದವಿ ಪಡೆಯುವ ದಾರಿದೀಪವಾಗಿದೆ ಎಂದು ತಿಳಿಸಿದ್ದಾರೆ.

ನಗರದ ಮಲ್ಲೇಶ್ವರಂನಲ್ಲಿ ಕೇಂದ್ರ ಕಚೇರಿ ಸೇರಿ ಯಲಹಂಕ, ಕೆ.ಆರ್.ಪುರ, ಹುಳಿಮಾವು, ಹಲಸೂರು, ಬನಶಂಕರಿ, ಎಲೆಕ್ಟ್ರಾನಿಕ್ ಸಿಟಿ, ವೈಟ್‌ಫೀಲ್ಡ್, ಆನೇಕಲ್‌ನಲ್ಲಿ ಶಾಖೆಗಳಿದ್ದು, ವರ್ಷಾಂತ್ಯದೊಳಗೆ ತುಮಕೂರು ಮತ್ತು ಮೈಸೂರಿನಲ್ಲಿ ಆರಂಭಿಸಲಿದ್ದೇವೆ. ಹೆಚ್ಚಿನ ಮಾಹಿತಿಗೆ ಮೊ:-80957 68829 ಸಂಪರ್ಕಿಸಲು ಅವರು ಕೋರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News