ರಾಜಧಾನಿಯಲ್ಲಿ ಅಕ್ರಮ ನೆಲೆಸಿದ್ದ ವಲಸಿಗರ ಬಂಧನ

Update: 2019-06-16 17:45 GMT

ಬೆಂಗಳೂರು, ಜೂ.16: ವೀಸಾ ಅವಧಿ ಮುಗಿದರೂ ಅಕ್ರಮವಾಗಿ ನಗರದಲ್ಲಿ ನೆಲೆಸಿದ್ದ ಆಫ್ರಿಕಾ ದೇಶಗಳ 12 ಮಂದಿ ಪ್ರಜೆಗಳನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳು ವಿದ್ಯಾರ್ಥಿ, ವ್ಯಾಪಾರಿ ಹಾಗೂ ಪ್ರವಾಸಿ ವೀಸಾದಲ್ಲಿ ನಗರಕ್ಕೆ ಬಂದು ವೀಸಾ ಅವಧಿ ಮುಗಿದ್ದರೂ ತಮ್ಮ ದೇಶಗಳಿಗೆ ಹಿಂತಿರುಗದೆ ವೀಸಾ ಅವಧಿಯನ್ನೂ ವಿಸ್ತರಿಸಿಕೊಳ್ಳದೆ ಬಾಡಿಗೆ ಮನೆ ಮಾಡಿಕೊಂಡು ಅಕ್ರಮವಾಗಿ ನೆಲೆಸಿದ್ದರು ಎನ್ನಲಾಗಿದೆ.

ಎಸಿಪಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಈಶಾನ್ಯ ವಿಭಾಗ ಹಾಗೂ ಯಲಹಂಕ ಉಪನಗರದ ಪೊಲೀಸರು ಎಫ್‌ಆರ್‌ಆರ್‌ಓ ಅಧಿಕಾರಿಗಳ ಜೊತೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಯಲಹಂಕ ಸುತ್ತಮುತ್ತ ಅಕ್ರಮವಾಗಿ ನೆಲೆಸಿದ್ದ 12 ಮಂದಿ ಆಫ್ರಿಕಾ ಪ್ರಜೆಗಳನ್ನು ಬಂಧಿಸಲಾಗಿದೆ.

ಆರೋಪಿಗಳ ವಿರುದ್ಧ ಪಾಸ್ ಪೋರ್ಟ್, ವಿದೇಶಿ ಕಾಯ್ದೆ ಹಾಗೂ ಇನ್ನಿತರ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News