ಗರಿಷ್ಠ ಪಂದ್ಯ ಆಡಿದ 2ನೇ ದಾಂಡಿಗ ಧೋನಿ

Update: 2019-06-16 18:55 GMT

ಮ್ಯಾಂಚೆಸ್ಟರ್, ಜೂ.16: ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ರವಿವಾರ ಪಾಕಿಸ್ತಾನ ವಿರುದ್ಧ ವಿಶ್ವಕಪ್ ಪಂದ್ಯವನ್ನಾಡುವ ಮೂಲಕ ಗರಿಷ್ಠ ಏಕದಿನ ಪಂದ್ಯಗಳನ್ನು ಆಡಿದ ಭಾರತದ ಎರಡನೇ ಆಟಗಾರ ಎನಿಸಿಕೊಂಡರು.

ಧೋನಿ ಭಾರತದ ಪರ 341ನೇ ಏಕದಿನ ಪಂದ್ಯವನ್ನಾಡುವ ಮೂಲಕ ರಾಹುಲ್ ದ್ರಾವಿಡ್ ದಾಖಲೆಯನ್ನು ಹಿಂದಿಕ್ಕಿದ್ದಾರೆ. ಧೋನಿ ಪಾಕ್ ವಿರುದ್ಧದ ಪಂದ್ಯದಲ್ಲಿ 1 ರನ್ ಗಳಿಸಿ ಔಟಾದರು. ದ್ರಾವಿಡ್ 340 ಪಂದ್ಯಗಳನ್ನು ಆಡಿದ್ದಾರೆ. ಸಚಿನ್ ತೆಂಡುಲ್ಕರ್ 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರ ಬಳಿಕ ಗರಿಷ್ಠ ಏಕದಿನ ಪಂದ್ಯಗಳನ್ನು ಆಡಿದ ಎರಡನೇ ದಾಂಡಿಗ ಧೋನಿ.

ಧೋನಿ ಏಷ್ಯಾ ಇಲೆವೆನ್ ಪರ 3 ಪಂದ್ಯಗಳನ್ನು ಆಡಿದ್ದಾರೆ. ದ್ರಾವಿಡ್ ಏಷ್ಯಾ ಇಲೆವೆನ್ ತಂಡದಲ್ಲಿ 1 ಮತ್ತು ಐಸಿಸಿ ಇಲೆವೆನ್ ತಂಡದಲ್ಲಿ 3 ಪಂದ್ಯಗಳಲ್ಲಿ ಆಡಿದ್ದಾರೆ.

  

ಮಾಜಿ ನಾಯಕರಾದ ಮುಹಮ್ಮದ್ ಅಝರುದ್ದೀನ್ 334 ಏಕದಿನ ಮತ್ತು ಸೌರವ್ ಗಂಗುಲಿ 308, ಯುವರಾಜ್ ಸಿಂಗ್ 301 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. ಗಂಗುಲಿ ಏಷ್ಯಾ ಇಲೆವೆನ್ ತಂಡದಲ್ಲಿ 3 ಪಂದ್ಯಗಳನ್ನು ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News