ಎಂಎಸ್‌ಐಎಲ್‌ಗೆ 2,200 ಕೋಟಿ ವಹಿವಾಟು ನಡೆಸುವ ಗುರಿ

Update: 2019-06-17 16:17 GMT

ಬೆಂಗಳೂರು, ಜೂ.17: ಸರಕಾರಿ ಸ್ವಾಮ್ಯದ ಮೈಸೂರು ಸೇಲ್ಸ್ ಇಂಟರ್ ನ್ಯಾಷನಲ್ ಲಿಮಿಟೆಡ್(ಎಂಎಸ್‌ಐಎಲ್) ಸಂಸ್ಥೆಯು 2018-19 ನೆ ಸಾಲಿನಲ್ಲಿ ಎರಡು ಸಾವಿರ ಕೋಟಿ ದಾಖಲೆ ವಹಿವಾಟು ನಡೆಸಿದ್ದು, ಪ್ರಸಕ್ತ ಸಾಲಿನಲ್ಲಿ 2,200 ಕೋಟಿ ರೂ.ಗಳ ವಹಿವಾಟು ಸಾಧಿಸುವ ಗುರಿಯನ್ನು ಹೊಂದಲಾಗಿದೆ.

ಸಂಸ್ಥೆಯ ಪುನರ್ ಪರಿಶೀಲನಾ ಸಭೆಯ ಬಳಿಕ ಪತ್ರಿಕಾ ಪ್ರಕಟನೆ ನೀಡಿದ್ದು, ಸಂಸ್ಥೆಯು 74 ಜನೌಷಧಿ ಕೇಂದ್ರಗಳನ್ನು ಪ್ರಾರಂಭಿಸಿದೆ. ಕಡಿಮೆ ಬೆಲೆಯಲಿ ಔಷಧಿಗಳನ್ನು ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಲೇಖಕ್ ಹಾಗೂ ವಿದ್ಯಾ ನೋಟ್ ಪುಸ್ತಕಗಳ ಮಾರಾಟ ಮತ್ತು ಇತರೆ ಲೇಖನ ಸಾಮಗ್ರಿಗಳನ್ನು ಸಾರ್ವಜನಿಕ ಹಾಗೂ ಸರಕಾರಿ ಇಲಾಖೆಗಳಿಗೆ ಸರಬರಾಜು ಮಾಡಿ 83.81 ಕೋಟಿ ರೂ.ಗಳ ವಹಿವಾಟು ಮಾಡಿದೆ.

ಸಂಸ್ಥೆಯ ವತಿಯಿಂದ ರಾಜ್ಯಾದ್ಯಂತ ಚಿಟ್‌ಫಂಡ್ ಶಾಖೆಗಳನ್ನು ಪ್ರಾರಂಭಿಸಿದ್ದು, ಸಾರ್ವಜನಿಕರು ಹಣವನ್ನು ಸರಕಾರಿ ಸಂಸ್ಥೆಯ ಚಿಟ್‌ಫಂಡ್ ಯೋಜನೆಯಲ್ಲಿ ಉತ್ತಮ ಭವಿಷ್ಯಕ್ಕಾಗಿ ಅನುಕೂಲ ಮಾಡಿಕೊಡಲಾಗುತ್ತಿದೆ. ಈ ವಿಭಾಗದಿಂದ 235 ಕೋಟಿ ರೂ.ಗಳು ವಹಿವಾಟು ಮಾಡಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ವಿದೇಶಿ ಮರಳು ಪರಿಚಯಿಸಲಾಗಿದೆ. ರಾಜ್ಯದಲ್ಲಿ 800 ಸಿಎಲ್-11 ಸಿ ಮದ್ಯ ಮಳಿಗೆಗಳಿದ್ದು, ಇನ್ನೂ 554 ಮದ್ಯ ಮಳಿಗೆ ಪ್ರಾರಂಭಿಸುವ ಗುರಿಯಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News