ಪರ್ಲ್ ಆರ್ಕ್ ಸಿಸ್ಟಮ್ಸ್ ನಿಗಮದೊಂದಿಗೆ ಬೆಂಗಳೂರು ವಿವಿ ಒಪ್ಪಂದ

Update: 2019-06-17 17:06 GMT

ಬೆಂಗಳೂರು, ಜೂ.17: ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಪರ್ಲ್ ಆರ್ಕ್ ಸಿಸ್ಟಮ್ಸ್ ನಿಗಮ ನಿಯಮಿತ ತಂತ್ರಜ್ಞಾನ ವಿಷಯದಲ್ಲಿ ಸಹಕಾರಕ್ಕಾಗಿ ಒಪ್ಪಂದವೊಂದನ್ನು ಮಾಡಿಕೊಳ್ಳಲಾಗಿದೆ.

ವಿಶ್ವವಿದ್ಯಾಲಯದ ಪರವಾಗಿ ಕುಲಸಚಿವ ಪ್ರೊ.ಬಿ.ಕೆ. ರವಿ ಮತ್ತು ಪರ್ಲ್ ಆರ್ಕ್‌ನ ಪರವಾಗಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಟಿ.ಸಿ.ರವೀಶ ಒಡಂಬಡಿಕೆಗೆ ಸಹಿ ಹಾಕಿದರು. ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ.ಎಂ.ರಾಮಚಂದ್ರ ಮೋಹನ್, ಎಂ.ಸಿ.ಎ ವಿಭಾಗದ ಮುಖ್ಯಸ್ಥ ಪ್ರೊ.ಬಿ.ಎಲ್.ಮುರಳೀಧರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಒಡಂಬಡಿಕೆ ಮುಖೇನ ಕಂಪನಿಯು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಮುಂದಿನ ಪೀಳಿಗೆಯ ತಂತ್ರಜ್ಞಾನದ ವಿಷಯದಲ್ಲಿ ಮಾಹಿತಿಯನ್ನು ಒದಗಿಸಲಿದೆ. ಪರಿಣತಿ ಹೊಂದಿರುವ ಕ್ಷೇತ್ರಗಳಲ್ಲಿ ಕಂಪನಿ ಮತ್ತು ವಿವಿಯು ಸಂಶೋಧನೆಯನ್ನು ಕೈಗೊಳ್ಳಲಿದೆ. ಕಂಪನಿಯು ವಿದ್ಯಾರ್ಥಿಗಳಿಗೆ ಉದ್ಯಮ ಕ್ಷೇತ್ರದಲ್ಲಿ ಚಾಲ್ತಿಯಲ್ಲಿರುವ ತಂತ್ರಜ್ಞಾನದ ವಿಷಯದಲ್ಲಿ, ತನ್ನ ಕಂಪನಿಯಲ್ಲಿ ತರಬೇತಿಯನ್ನು ನೀಡಲಿದೆ. ಅಷ್ಟೇ ಅಲ್ಲದೆ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಪರಿಕ್ರಮದ ವಿಷಯವಾಗಿ ಸಲಹೆ, ಶಿಕ್ಷಕರಿಗೆ ತರಬೇತಿ ಮತ್ತು ಕೆಲವು ನುರಿತ ವಿಷಯಗಳ ಬಗ್ಗೆ ವಿಶ್ವವಿದ್ಯಾಲಯದಲ್ಲಿ ತರಬೇತಿ ಶಿಬಿರ ನಡೆಸಲು ಒಡಂಬಡಿಕೆಯಿಂದ ಸಾಧ್ಯವಾಗಿದೆ. ಈ ಒಪ್ಪಂದ ಮೂರು ವರ್ಷ ಚಾಲ್ತಿಯಲ್ಲಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News