ಭಾರತ-ಪಾಕ್ ವಿಶ್ವಕಪ್ ಪಂದ್ಯದ ಅಂಕಿ-ಅಂಶ

Update: 2019-06-17 18:46 GMT

►7ನೇ ಗೆಲುವು

: ಭಾರತ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆದ ಮಳೆಬಾಧಿತ ಪಂದ್ಯದಲ್ಲಿ 89 ರನ್‌ಗಳ ಗೆಲುವು ದಾಖಲಿಸಿ ಪಾಕ್ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಆಡಿರುವ ಎಲ್ಲ 7 ಪಂದ್ಯಗಳನ್ನು ಜಯಿಸಿ 7-0 ಗೆಲುವಿನ ದಾಖಲೆ ಕಾಯ್ದುಕೊಂಡಿದೆ. 40 ಓವರ್‌ಗಳಲ್ಲಿ ಪರಿಷ್ಕೃತ 302 ರನ್ ಗುರಿ ಪಡೆದ ಪಾಕ್ 6 ವಿಕೆಟ್‌ಗೆ 212 ರನ್ ಗಳಿಸಿತು.1992ರ ವಿಶ್ವಕಪ್‌ನಲ್ಲಿ ಮೊದಲ ಬಾರಿ ಸೋತಿದ್ದ ಪಾಕ್ ಏಳನೇ ಪ್ರಯತ್ನದಲ್ಲೂ ಗೆಲುವಿನ ದಡ ಸೇರಲು ವಿಫಲವಾಗಿದೆ.

►01: ವಿಜಯ ಶಂಕರ್ ವಿಶ್ವಕಪ್‌ನಲ್ಲಿ ತಾನೆಸೆದ ಮೊದಲ ಎಸೆತದಲ್ಲೇ ವಿಕೆಟ್ ಪಡೆದ ಭಾರತದ ಮೊದಲ ಆಟಗಾರನಾಗಿದ್ದಾರೆ. ಶಂಕರ್ ಪಾಕ್ ಆರಂಭಿಕ ಆಟಗಾರ ಇಮಾಮ್‌ವುಲ್ ಹಕ್ ವಿಕೆಟ್ ಕಬಳಿಸಿದ್ದರು.

►01:  ಪಾಕಿಸ್ತಾನ ನಾಯಕ ಸರ್ಫರಾಝ್ ಅಹ್ಮದ್ ಟಾಸ್ ಜಯಿಸಿ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಭಾರತ-ಪಾಕ್ ವಿಶ್ವಕಪ್ ಪಂದ್ಯದಲ್ಲಿ ಇದೇ ಮೊದಲ ಬಾರಿ ಟಾಸ್ ಜಯಿಸಿದ ನಾಯಕ ಫೀಲ್ಡಿಂಗ್ ಆಯ್ದುಕೊಂಡರು.

► 336/5: ಭಾರತ ತಂಡ ಪಾಕ್ ವಿರುದ್ಧ ಗರಿಷ್ಠ ಮೊತ್ತ ದಾಖಲಿಸಿತು. ವಿಶ್ವಕಪ್ ಟೂರ್ನಿಯಲ್ಲಿ ಭಾರತ ದಾಖಲಿಸಿರುವ ಗರಿಷ್ಠ ಸ್ಕೋರ್ ಕೂಡ ಇದಾಗಿದೆ.

►136:  ರೋಹಿತ್ ಹಾಗೂ ಕೆ.ಎಲ್.ರಾಹುಲ್ ಮೊದಲ ವಿಕೆಟ್‌ಗೆ 136 ರನ್ ಸೇರಿಸಿದರು. ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಭಾರತ ಮೊದಲ ವಿಕೆಟ್‌ಗೆ ದಾಖಲಿಸಿದ ಗರಿಷ್ಠ ಜೊತೆಯಾಟ ಇದಾಗಿದೆ.

►09: ಈ ವರ್ಷದ ವಿಶ್ವಕಪ್‌ನಲ್ಲಿ 250 ಹಾಗೂ ಅದಕ್ಕಿಂತ ಹೆಚ್ಚು ರನ್ ಬೆನ್ನಟ್ಟಲು ತಂಡಗಳು 9 ಬಾರಿ ವಿಫಲವಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News