ಶಾಲಾ ಬಸ್ ಚಕ್ರಕ್ಕೆ ಸಿಲುಕಿ ಬಾಲಕ ಮೃತ್ಯು
Update: 2019-06-18 21:45 IST
ಬೆಂಗಳೂರು, ಜೂ.18: ಶಾಲಾ ಬಸ್ ನ ಚಕ್ರಕ್ಕೆ ಸಿಲುಕಿ 6 ವರ್ಷದ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ರಾಜರಾಜೇಶ್ವರಿ ನಗರದ ರಾಜೇಶ್ ಅವರ ಪುತ್ರ ಚಿಂತನ್(6) ಮೃತ ಬಾಲಕನಾಗಿದ್ದು, ಸ್ವರ್ಗರಾಣಿ ಶಾಲೆಯ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಮಂಗಳವಾರ ಮಧ್ಯಾಹ್ನ ಶಾಲೆಯಿಂದ ಹೊರಬಂದಾಗ, ಶಾಲೆಯ ಬಸ್ ಚಾಲಕ ಸುರೇಶ್, ಮಗು ಹಿಂದೆ ಹೋಗುತ್ತಿದೆ ಎಂದು ತಿಳಿದು, ಬಸ್‌ನ್ನು ಮುಂದೆ ಚಲಾಯಿಸಿದ್ದಾನೆ. ಆದರೆ, ಬಾಲಕ ಚಿಂತನ್ ಬಸ್ ಚಕ್ರಕ್ಕೆ ಸಿಲುಕಿ ಮೃತ ಪಟ್ಟಿದ್ದಾನೆ. ಘಟನೆಗೆ ಚಾಲಕನ ನಿರ್ಲಕ್ಷವೇ ಕಾರಣ ಎಂದು ತಿಳಿದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಕೆಂಗೇರಿ ಸಂಚಾರ ಠಾಣಾ ಪೊಲೀಸರು ಚಾಲಕ ಸುರೇಶ್‌ನನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.