ಬಾಡಿಗೆ ಮನೆಗೆ ಹಾನಿ ಮಾಡಿದ ಪ್ರಕರಣ: ನಟ ಯಶ್ ತಾಯಿಯ ವಿರುದ್ಧದ ಎಫ್‌ಐಆರ್ ರದ್ದು

Update: 2019-06-18 16:29 GMT

ಬೆಂಗಳುರು, ಜೂ.18: ನಟ ಯಶ್ ಕುಟುಂಬ ಬಾಡಿಗೆ ಮನೆ ತೆರವುಗೊಳಿಸುವಾಗ ಮನೆಯಲ್ಲಿ ಆದ ಹಾನಿಗೆ ಕುರಿತಂತೆ ಯಶ್ ತಾಯಿ ಪುಷ್ಪಾ ವಿರುದ್ದ ದಾಖಲಾಗಿದ್ದ ಎಫ್‌ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಗಿರಿನಗರ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ರದ್ದು ಕೋರಿ ಯಶ್ ತಾಯಿ ಪುಷ್ಪಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು. ಯಶ್ ತಾಯಿ ಪರ ವಾದಿಸಿದ ವಕೀಲರು, ಈ ಹಿಂದೆ ಹೈಕೋರ್ಟ್ ಹೇಳಿದ್ದಂತೆ ಕೇಳಿದ್ದೇವೆ. ಕೋರ್ಟ್ ನಿಗದಿಪಡಿಸಿದ ಹಣವನ್ನು ಮನೆ ಮಾಲಕರಿಗೆ ನೀಡಿದ್ದೇವೆ. ಮನೆಗಾಗಿ ನಾವು ಹಾಕಿದ್ದ ವಸ್ತುಗಳನ್ನು ಮಾತ್ರ ಕೊಂಡೊಯ್ದಿದಿದ್ದೇವೆ. ಅವುಗಳನ್ನು ತೆಗೆಯುವಾಗ ಅಲ್ಪಸ್ವಲ್ಪ ಡ್ಯಾಮೇಜ್ ಆಗಿದೆ. ಅದಕ್ಕಾಗಿ ಇವರು ಎಫ್‌ಐಆರ್ ದಾಖಲಿಸಿರುವುದು ಸರಿಯಿಲ್ಲ. ಹೀಗಾಗಿ, ಎಫ್‌ಐಆರ್ ರದ್ದು ಪಡಿಸಬೇಕೆಂದು ಮನವಿ ಮಾಡಿದರು. ಹೀಗಾಗಿ, ನ್ಯಾಯಪೀಠವು ಎಫ್‌ಐಆರ್ ರದ್ದುಗೊಳಿಸಿ ಆದೇಶ ಹೊರಡಿಸಿತು.

ಪ್ರಕರಣವೇನು: ಜೂ.7ರಂದು ಯಶ್ ಕುಟುಂಬ ಮನೆ ಖಾಲಿ ಮಾಡುವಾಗ 28 ಲಕ್ಷ ಬೆಲೆ ಬಾಳುವ ಮನೆ ವಸ್ತು ಹಾಗೂ ಪೀಠೋಪಕರಣಕ್ಕೆ ಹಾನಿ ಮಾಡಿದ್ದಾರೆ ಎಂದು ಮನೆ ಮಾಲಕಿ ಡಾ.ವನಜಾ ಗಿರಿನಗರ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಪಡೆದು ಎನ್‌ಸಿಆರ್ ದಾಖಲಿಸಿದ್ದ ಪೊಲೀಸರು ನಂತರ ಎಫ್‌ಐಅರ್ ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News