ಬಿಬಿಎಂಪಿ: 300 ಕೆಜಿ ಅಕ್ರಮ ಪ್ಲಾಸ್ಟಿಕ್ ವಶ

Update: 2019-06-18 17:20 GMT

ಬೆಂಗಳೂರು, ಜೂ.18: ಬಿಬಿಎಂಪಿ ಮಹದೇವಪುರ ವಲಯ ಉಪ ಆರೋಗ್ಯಾಧಿಕಾರಿಗಳು ಹಾಗೂ ಹಿರಿಯ ಆರೋಗ್ಯ ಪರೀಕ್ಷಕರ ತಂಡ ಮಹದೇವಪುರ ವಲಯದ ಮುನ್ನೆಕೊಳಲು ಮುಖ್ಯರಸ್ತೆಗೆ ಭೇಟಿ ನೀಡಿ ಅಲ್ಲಿರುವ ಎಲ್ಲಾ ಉದ್ದಿಮೆಗಳನ್ನು ಪರಿಶೀಲಿಸಿತು.

ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಉದ್ದಿಮೆದಾರರಿಂದ 300 ಕೆ.ಜಿ.ಪ್ಲಾಸ್ಟಿಕ್ ಮುಟ್ಟುಗೋಲು ಹಾಕಿ 30 ಸಾವಿರ ರೂ. ದಂಡ ವಿಧಿಸಲಾಯಿತು ಹಾಗೂ ಮುನ್ನೆಕೊಳಲು ಮುಖ್ಯ ರಸ್ತೆಯಲ್ಲಿರುವ ರೆಸ್ಟೋರೆಂಟ್‌ವೊಂದನ್ನು ಮುಚ್ಚಲಾಯಿತು ಎಂದು ಉಪ ಆರೋಗ್ಯಾಧಿಕಾರಿಗಳು ಮಹದೇವಪುರ ವಲಯ, ಇವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News