ಐಎಂಎ ವಂಚನೆ ಪ್ರಕರಣ: ಸಿಟ್‌ನಿಂದ ರೋಷನ್ ಬೇಗ್ ವಿಚಾರಣೆ ಸಾಧ್ಯತೆ

Update: 2019-06-19 15:31 GMT

ಬೆಂಗಳೂರು, ಜೂ.19: ಐಎಂಎ ಸಮೂಹ ಸಂಸ್ಥೆ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಶಾಸಕ ರೋಷನ್ ಬೇಗ್ ಅವರನ್ನು ವಿಚಾರಣೆಗೊಳಪಡಿಸಿ, ಅವರ ಹೇಳಿಕೆ ದಾಖಲಿಸಿಕೊಳ್ಳಲು ಸಿಟ್(ಎಸ್‌ಐಟಿ) ತಯಾರಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ಪ್ರಕರಣದಲ್ಲಿ ಶಾಸಕ ರೋಷನ್ ಬೇಗ್ ಕುರಿತು ಆಡಿಯೊ ಒಂದರಲ್ಲಿ ಐಎಂಎ ಮಾಲಕ ಮನ್ಸೂರ್ ಖಾನ್ ಆರೋಪ ಮಾಡಿದ್ದ. ಈ ಹಿನ್ನೆಲೆಯಲ್ಲಿ ರೋಷನ್ ಬೇಗ್ ಅವರ ವಿಚಾರಣೆಯೂ ವಿಶೇಷ ತನಿಖಾ ತಂಡಕ್ಕೆ ಮುಖ್ಯವಾಗಿದೆ ಎಂದು ತಿಳಿದುಬಂದಿದೆ.

ಆಡಿಯೊದಲ್ಲಿರುವ ಧ್ವನಿ ನಕಲಿಯೂ, ಆಸಲಿಯೂ ಎಂಬುವುದು ಸದ್ಯಕ್ಕೆ ದೃಢವಾಗಿಲ್ಲ. ಅಷ್ಟೇ ಅಲ್ಲದೆ, ಈಗಾಗಲೇ ಮನ್ಸೂರ್‌ನ ಹಲವು ಆಡಿಯೊಗಳನ್ನು ಸಂಗ್ರಹಿಸಿರುವ ಸಿಟ್, ಅವುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದೆ. ರೋಷನ್ ಬೇಗ್ ಬಗ್ಗೆ ಮಾತನಾಡಿರುವ ಆಡಿಯೊ ಹಾಗೂ ಸಿಟ್ ಸಂಗ್ರಹಿಸಿರುವ ಇತರೆ ಆಡಿಯೊಗಳಲ್ಲಿನ ಧ್ವನಿ ಒಂದೇ ಎಂದು ಎಫ್‌ಎಸ್‌ಎಲ್ ವರದಿಯಲ್ಲಿ ದೃಢಪಟ್ಟರೆ, ರೋಷನ್ ಬೇಗ್ ಅವರ ವಿಚಾರಣೆ ನಡೆಸಲಿದೆ. ಹೀಗಾಗಿ, ತನಿಖಾಧಿಕಾರಿಗಳು ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News