ಆ.8ರಂದು ಕೈಗಾರಿಕೋದ್ಯಮಿಗಳಿಗೆ ಶ್ರೇಷ್ಠತಾ ಪ್ರಶಸ್ತಿ ಪ್ರದಾನ

Update: 2019-06-19 18:12 GMT

ಬೆಂಗಳೂರು, ಜೂ.19: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳಿಗೆ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.8ರಂದು ಯಶವಂತಪುರದ ತಾಜ್ ವಿವಾಂತ ಹೊಟೇಲ್‌ನಲ್ಲಿ ಪೀಣ್ಯ ಕೈಗಾರಿಕಾ ಸಂಘ ಆಯೋಜಿಸಿದೆ.

ಬುಧವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಎಂ.ಗಿರಿ, ಪ್ರಶಸ್ತಿ ಪ್ರದಾನದಿಂದಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳಿಗೆ ಅವರ ಪರಿಶ್ರಮ ಕಾರ್ಯ ತಾತ್ಪರತೆ, ಮಾರುಕಟ್ಟೆ ನೈಪುಣ್ಯತೆ ಹಾಗೂ ಪ್ರಖ್ಯಾತಿಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಹೇಳಿದರು.

ಕೈಗಾರಿಕೋದ್ಯಮಿಗಳು ಎದುರಾಗುವ ಸಂಕಷ್ಟಗಳಿಗೆ ಎದೆಗುಂದದೆ ಮುನ್ನುಗ್ಗಬೇಕು. ಹೊಸ ತಂತ್ರಜ್ಞಾನ, ಹೊಸ ಮಾದರಿ, ಸಮಯ ಮತ್ತು ತಮ್ಮಲ್ಲಿರುವ ಬಂಡವಾಳದೊಂದಿಗೆ ಯಾವಾಗಲೂ ನಮ್ಮ ದೇಶದ ಆರ್ಥಿಕ ಬೆಳವಣಿಗೆಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಯಾವುದೇ ಉದ್ದಿಮೆ ಯಶಸ್ಸು ಕಾಣಲು ಬರಿ ಯೋಜನೆಗಳಾಗಲಿ ವೆಚ್ಚಗಳ ವೌಲ್ಯ ಮಾಪನವಾಗಲಿ ಅಥವಾ ವ್ಯವಹಾರವಾಗಲಿ ಕಾರಣವಲ್ಲ. ಆದರೆ, ಆರೋಗ್ಯಕರವಾದ ರೋಮಾಂಚನಕಾರಿ ಕೆಲಸ, ಕೌಟುಂಬಿಕ ಸಮತೋಲನ ನಿರ್ಣಾಯಕವಾಗುತ್ತದೆ. ಅಲ್ಲದೆ ದೇಶದ ವ್ಯವಹಾರದಲ್ಲಿ ಶೇ.80ರಷ್ಟು ಪಾಲು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳದಾಗಿದ್ದು, ಉದ್ಯೋಗಾವಕಾಶದ ಹಾಗೂ ಆರ್ಥಿಕ ಕ್ಷೇತ್ರ 1/3 ಭಾಗದಷ್ಟು ಕೊಡುಗೆ ಈ ವಲಯದೇ ಆಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News