ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮಾರ್ಕಸ್ ಸ್ಟೋನಿಸ್

Update: 2019-06-19 18:31 GMT

ನಾಟಿಂಗ್‌ಹ್ಯಾಮ್, ಜೂ.19: ಆಲ್‌ರೌಂಡರ್ ಮಾರ್ಕಸ್ ಸ್ಟೋನಿಸ್ ಸ್ನಾಯು ಸೆಳೆತದಿಂದ ಚೇತರಿಸಿಕೊಂಡಿದ್ದು, ಆಸ್ಟ್ರೇಲಿಯದ ಪರ ವಿಶ್ವಕಪ್‌ನ ಇನ್ನುಳಿದ ಪಂದ್ಯಗಳಲ್ಲಿ ಆಡಲು ಫಿಟ್ ಆಗಿದ್ದಾರೆ. ಆದರೆ, ಕೋಚ್ ಜಸ್ಟಿನ್ ಲ್ಯಾಂಗರ್, ಸ್ಟೋನಿಸ್ ಶೀಘ್ರವೇ ವಾಪಸಾಗುವ ಬಗ್ಗೆ ಖಚಿತಪಡಿಸಿಲ್ಲ.

‘‘ಗಾಯದ ಸಮಸ್ಯೆಯಿಂದಾಗಿ ಕಳೆದ ಎರಡು ವಿಶ್ವಕಪ್ ಪಂದ್ಯಗಳಿಂದ ಹೊರಗುಳಿದಿದ್ದ ಸ್ಟೋನಿಸ್ ಗುರುವಾರ ನಡೆಯುವ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಆಡುವ ಬಗ್ಗೆ ಖಾತ್ರಿಯಿಲ್ಲ. ಜೂ.9 ರಂದು ಭಾರತ ವಿರುದ್ಧ ನಡೆದ ಪಂದ್ಯದ ವೇಳೆ ಬೌಲಿಂಗ್ ಮಾಡುವಾಗ ಸ್ಟೋನಿಸ್‌ಗೆ ಗಾಯವಾಗಿತ್ತು’’ ಎಂದು ಲ್ಯಾಂಗರ್ ಹೇಳಿದ್ದಾರೆ.

ಸ್ಟೋನಿಸ್ ಆಸ್ಟ್ರೇಲಿಯದ 15 ಸದಸ್ಯರ ತಂಡದಲ್ಲಿ ಉಳಿದುಕೊಳ್ಳಲಿದ್ದಾರೆ. ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಆಡುವ ಸಾಧ್ಯತೆಯಿದೆ. ಅವರ ಮೇಲೆ ನಿಗಾವಹಿಸಲಾಗಿದ್ದು, ಅವರೊಬ್ಬ ಎಲೈಟ್ ಅಥ್ಲೀಟ್ ಆಗಿದ್ದಾರೆ’’ ಎಂದು ಕೋಚ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News