ಬೆಂಗಳೂರಿನ ಮಸೀದಿಗೆ ‘ನರೇಂದ್ರ ಮೋದಿ’ ಹೆಸರು: ವಾಸ್ತವ ಏನು ಗೊತ್ತೇ?

Update: 2019-06-21 09:04 GMT

"ಬೆಂಗಳೂರಿನ ಮುಸ್ಲಿಮರು ಮಸೀದಿಯೊಂದಕ್ಕೆ ನರೇಂದ್ರಮೋದಿಯವರ ಹೆಸರು ಇಟ್ಟಿದ್ದಾರೆ. ಇದನ್ನು ನೋಡಿ ಎಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಯೋ ಗೊತ್ತಿಲ್ಲ" ಎಂಬ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

@mahesh10816 ಎಂಬ ಹೆಸರಿನ ಟ್ವಿಟ್ಟರ್ ಬಳಕೆದಾರ ಇದನ್ನು ಟ್ವೀಟ್ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಸ್ವತಃ ಮಹೇಶ್ ಅವರನ್ನು ಫಾಲೋ ಮಾಡುತ್ತಿದ್ದಾರೆ.

ಈ ಟ್ವೀಟ್ 400 ಬಾರಿ ಮರುಟ್ವೀಟ್ ಆಗಿದೆ. ಇದರ ಜತೆಗೆ ಎರಡು ಭಾವಚಿತ್ರಗಳನ್ನೂ ಸೇರಿಸಲಾಗಿದೆ. ಎಡಬದಿಯಲ್ಲಿ ಇರುವ ಚಿತ್ರದಲ್ಲಿ, ಮೋದಿ ಮಸೀದಿ ಎಂದು ಪ್ರವೇಶದ್ವಾರದ ಬಳಿ ಬರೆದಿರುವುದು ಕಾಣಿಸುತ್ತಿದೆ. ಬಲಬದಿಯಲ್ಲಿ ಇರುವ ಚಿತ್ರದಲ್ಲಿ, ಮೋದಿಯವರ ಚಿತ್ರ ಹಿನ್ನೆಲೆಯಲ್ಲಿದೆ. ಈ ಪೋಸ್ಟ್ ವಾಟ್ಸ್ ಆ್ಯಪ್‍ನಲ್ಲೂ ಹರಿದಾಡಿತ್ತು.

ಪ್ರಧಾನಿ ಮೋದಿಯ ಹೆಸರಿಟ್ಟಿಲ್ಲ

ಬೆಂಗಳೂರಿನಲ್ಲಿ ಮೋದಿ ಮಸೀದಿ ಎಂಬ ಹೆಸರು ಇದ್ದರೂ, ಅದು ಪ್ರಧಾನಿ ನರೇಂದ್ರ ಮೋದಿಯವರ ಹೆಸರು ಅಲ್ಲ. ಈ ಹೆಸರನ್ನು ಇಟ್ಟಿರುವುದು ವಾಸ್ತವವಾಗಿ 175 ವರ್ಷಗಳ ಹಿಂದೆ. ದಾನಶೀಲ ಮೋದಿ ಅಬ್ದುಲ್ ಗಫೂರ್ ಅವರ ಹೆಸರನ್ನು ಇಡಲಾಗಿತ್ತು. ಈ ಮಸೀದಿಯನ್ನು ಇತ್ತೀಚೆಗೆ ನವೀಕರಿಸಲಾಗಿತ್ತು. ಈ ಕಾರಣದಿಂದ ಅದು ಸುದ್ದಿಯಲ್ಲಿದೆ. ಈ ಮಸೀದಿ ನಗರದ ಶಿವಾಜಿನಗರ ಪ್ರದೇಶದಲ್ಲಿದೆ.

ಪೋಸ್ಟ್ ಮಾಡಲಾದ ಚಿತ್ರ ವಾಸ್ತವವಾಗಿ ಮೋದಿ ಮಸೀದಿ. ಆದರೆ ಪೋಸ್ಟರ್ ನಲ್ಲಿ ಮೋದಿ ಚಿತ್ರವಿರುವ ಚಿತ್ರದ ನಿಖರತೆ ದೃಢಪಟ್ಟಿಲ್ಲ. ಇದು ಮೋದಿ ಮಸೀದಿಗೆ ಸಂಬಂಧಿಸಿದ್ದೂ ಅಲ್ಲ. ಪೋಸ್ಟರ್‍ನ ಹಿನ್ನೆಲೆಯಲ್ಲಿ ಮೋದಿಯವರು ಇಂದೋರ್‍ನ ಅಶಾರಾ ಮುಬಾರಕಗೆ 2018ರಲ್ಲಿ ಭೇಟಿ ನೀಡುವುದು ಎಂದು ಕಂಡುಬರುತ್ತದೆ. ಆದ್ದರಿಂದ ಮಸೀದಿಗೆ ನರೇಂದ್ರ ಮೋದಿಯವರ ಹೆಸರಿಟ್ಟಿರುವುದು ಸುಳ್ಳು ಎನ್ನುವುದು ಸ್ಪಷ್ಟವಾಗಿದೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News