ಲಿವಿಂಗ್ ಟುಗೆದರ್ ನಲ್ಲಿದ್ದ ಯುವತಿ ನಿಗೂಢ ಸಾವು: ಕೊಲೆ ಆರೋಪ

Update: 2019-06-21 14:33 GMT

ಬೆಂಗಳೂರು, ಜೂ.21: ಸಹೋದ್ಯೋಗಿಯಾಗಿದ್ದ ಯುವಕನೊಬ್ಬನ ಜೊತೆ ಸಹಜೀವನ(ಲಿವಿಂಗ್ ಟುಗೆದರ್) ನಡೆಸುತ್ತಿದ್ದ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ನೆಲಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನೆಲಮಂಗಲ ಬಳಿಯ ಗೀತಾ ಗೋಲ್ಡನ್ ಸಿಮ್ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಗೀತಾ ಮೃತ ಯುವತಿ ಎಂದು ತಿಳಿದುಬಂದಿದೆ.

ಶಿವಮೊಗ್ಗದ ಸಾಗರ ಮೂಲದ ಗೀತಾ, ಕಳೆದ ಎರಡು ವರ್ಷಗಳಿಂದ ವಿಕಾಸ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ವಿಕಾಸ್ ಕೂಡ ಅದೇ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದನು. ವಿಕಾಸ್ ಮತ್ತು ಗೀತಾ ಎರಡು ವರ್ಷಗಳಿಂದ ಲಿವಿಂಗ್ ಟುಗೆದರ್‌ನಲ್ಲಿದ್ದರು ಎನ್ನಲಾಗಿದೆ.

'ಎರಡು ವರ್ಷ ಪ್ರೀತಿಸಿ ವಿಕಾಸ್ ಆಕೆಯ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದನು. ಬಳಿಕ ಗೀತಾರನ್ನು ಮದುವೆಯಾಗಲು ವಿಕಾಸ್ ನಿರಾಕರಿಸಿದ್ದು, ಇದೇ ವಿಚಾರವಾಗಿ ಪದೇ ಪದೇ ಇಬ್ಬರು ಜಗಳವಾಡಿಕೊಂಡಿದ್ದರು. ಅಷ್ಟೇ ಅಲ್ಲದೇ ತಾನು ಬೇರೆ ಯುವತಿಯನ್ನು ಮದುವೆಯಾಗುವುದಾಗಿ ವಿಕಾಸ್ ಹೇಳಿದ್ದನು. ಈಗ ಇದೇ ವಿಚಾರಕ್ಕೆ ಗೀತಾರನ್ನು ವಿಕಾಸ್ ಕೊಲೆ ಮಾಡಿರುವುದಾಗಿ ಪೋಷಕರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News