ವಂಡರ್‌ಲಾ ಪಾರ್ಕ್‌ನಲ್ಲಿ ಅವಘಡ: ನಾಲ್ವರಿಗೆ ಗಾಯ
Update: 2019-06-21 21:42 IST
ಬೆಂಗಳೂರು, ಜೂ.21: ಬಿಡದಿ ಬಳಿಯ ವಂಡರ್‌ಲಾ ಪಾರ್ಕ್‌ನಲ್ಲಿ ಅವಘಡ ಸಂಭವಿಸಿ ನಾಲ್ವರಿಗೆ ಗಾಯಗಳಾದ ಘಟನೆ ನಡೆದಿದ್ದು, ವಿಡಿಯೋ ವೈರಲ್ ಆಗಿದೆ.
ವಂಡರ್‌ಲಾ ಪಾರ್ಕ್‌ನಲ್ಲಿ ರೋಲರ್‌ನಲ್ಲಿ ಆಟವಾಡುತ್ತಿದ್ದಾಗ ಅವಘಡ ಸಂಭವಿಸಿದ್ದು, ಈ ವೇಳೆ ಐವರು ಯುವಕರ ಕಾಲು ರೋಲರ್‌ನಡಿ ಸಿಲುಕಿದೆ. ಕೆಲವು ನಿಮಿಷಗಳ ಕಾಲ ಯುವಕರು ನರಳಾಡಿದ್ದು, ಬಳಿಕ ಸಿಬ್ಬಂದಿಗಳು ರೋಲರ್‌ಅನ್ನು ಕೈಯಿಂದ ತಿರುಗಿಸಿ ಸರಿ ಮಾಡಿದ್ದಾರೆ. ಆದರೆ ರೋಲರ್‌ನಡಿ ಕಾಲು ಸಿಲುಕಿದ್ದರಿಂದ ನಾಲ್ವರು ಯುವಕರಿಗೆ ಗಾಯಗಳಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆ ಕಳೆದ ಮಂಗಳವಾರ ನಡೆದಿದೆ ಎನ್ನಲಾಗಿದ್ದು, ಶುಕ್ರವಾರ ವಿಡಿಯೋ ವೈರಲ್ ಆಗಿದೆ. ಘಟನೆ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ.