ಸೈಕಲ್‌ಗಳ ವಿತರಣೆಗೆ ಶಿಕ್ಷಣ ಇಲಾಖೆ ಅನುಮತಿ

Update: 2019-06-22 17:41 GMT

ಬೆಂಗಳೂರು, ಜೂ.22: ಪ್ರಸಕ್ತ ಶೈಕ್ಷಣಿಕ ವರ್ಷದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ 8ನೆ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಅನುಮತಿ ನೀಡಿದ್ದಾರೆ.

ಸೈಕಲ್‌ಗಳ ಜೋಡಣಾ ಸಮಯದಲ್ಲಿ ಗುಣಮಟ್ಟ ಪರಿಶೀಲಿಸಲು ಎರಡು ತಂಡಗಳನ್ನು ರಚಿಸಲಾಗಿದೆ. ಶಾಲಾವಾರು ಬೇಕಾದ ಸೈಕಲ್‌ಗಳ ಪಟ್ಟಿಯನ್ನು ಆನ್‌ಲೈನ್‌ನಲ್ಲಿಯೇ ನಮೂದಿಸಬೇಕು. ಕಳೆದ ವರ್ಷ ಬಳಕೆಯಾಗದ ಸೈಕಲ್‌ಗಳನ್ನು ಮೊದಲಿಗೆ ವಿತರಿಸಿ, ಇನ್ನಷ್ಟು ಸೈಕಲ್ ಬೇಕಾದರೆ ಅದರ ಮಾಹಿತಿ ನೀಡಬೇಕು ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News