ವಸತಿ ಪ್ರದೇಶಲ್ಲಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕ್ರಮಕ್ಕೆ ಬಿಬಿಎಂಪಿ ಕಾರ್ಯ ಯೋಜನೆ

Update: 2019-06-22 18:06 GMT

ಬೆಂಗಳೂರು, ಜೂ.22: ಪರಿಷ್ಕೃತ ನಗರ ಮಹಾಯೋಜನೆ 2015ರ ಪ್ರಕಾರ ವಸತಿ ಪ್ರದೇಶ ಎಂದು ಗುರುತಿಸಿರುವ ಕಡೆ ಕಾರ್ಯನಿರ್ವಹಿಸುತ್ತಿರುವ ವಾಣಿಜ್ಯ ಮಳಿಗೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಬಿಬಿಎಂಪಿ ಕಾರ್ಯ ಯೋಜನೆ ರೂಪಿಸಿದೆ.

ವಸತಿ ಪ್ರದೇಶದಲ್ಲಿ ವಾಣಿಜ್ಯ ಮಳಿಗೆಗಳು ಅತಿ ಹೆಚ್ಚಿರುವ ಪೂರ್ವ ವಲಯದಿಂದಲೇ ಕಾರ್ಯಾಚರಣೆ ಆರಂಭಿಸಲು ಪಾಲಿಕೆ ಸಿದ್ಧತೆ ನಡೆಸಿದೆ. ಇದುವರೆಗೆ ವಸತಿ ಪ್ರದೇಶದಲ್ಲಿ ಒಟ್ಟು 8,493 ಮಳಿಗೆಗಳನ್ನು ಗುರುತಿಸಿರುವ ಪಾಲಿಕೆಯು, ಇವುಗಳ ಮಾಲಕರಿಗೆ ನೋಟಿಸ್ ರವಾನೆ ಮಾಡಿದೆ.

ಬಾಣಸವಾಡಿ, ಕೆ.ಜಿ.ಹಳ್ಳಿ, ಕಮ್ಮನಹಳ್ಳಿ, ಇಂದಿರಾನಗರ, ಎಚ್‌ಬಿಆರ್ ಬಡಾವಣೆ ಹಾಗೂ ತಿಪ್ಪಸಂದ್ರ ಪ್ರದೇಶಗಳಲ್ಲೇ ಹೆಚ್ಚು ಇದ್ದು, ಪೂರ್ವ ವಲಯದಲ್ಲಿಯೇ 3,500 ಕ್ಕೂ ಅಧಿಕ ಮಳಿಗೆಗಳು ಇವೆ ಎಂದು ಅಂದಾಜಿಸಲಾಗಿದೆ.

ಪಶ್ಚಿಮ ವಲಯದ ಪ್ರಮುಖ ಪ್ರದೇಶಗಳಲ್ಲೂ ಇಂತಹ 2,100 ಮಳಿಗೆಗಳಿಗೆ ಪಾಲಿಕೆ ನೋಟಿಸ್ ನಿಡಿದೆ. ಸದಾಶಿವನಗರ, ಮಲ್ಲೇಶ್ವರ, ಗಾಯತ್ರಿನಗರ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ಹೆಚ್ಚು ಇದೆ. ಪಾಲಿಕೆಯು ವಿವಿಧ ವಲಯಗಳಲ್ಲಿ ಇದುವರೆಗೆ 715 ವಾಣಿಜ್ಯ ಮಳಿಗೆಗಳನ್ನು ಮುಚ್ಚಿಸಿದೆ. ಉಳಿದ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News