ಬೈಕ್ ಕಳವು ಪ್ರಕರಣ: ಇಬ್ಬರ ಬಂಧನ

Update: 2019-06-23 13:29 GMT

ಬೆಂಗಳೂರು, ಜೂ.23: ಬೈಕ್ ಕಳವು ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸುವಲ್ಲಿ ಮಡಿವಾಳ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೇರಳ ಮೂಲದ ಸಿಮ್‌ಜಿತ್ ಶಶಿಕುಮಾರ್ (22), ಜೋಸಿನ್ ಟಿಟೋಸ್ (20) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಕೇರಳದಿಂದ ಉದ್ಯೋಗ ಅರಸಿ ಬಂದಿದ್ದ ಆರೋಪಿಗಳು ಮಡಿವಾಳ ವ್ಯಾಪ್ತಿಯಲ್ಲಿ ಮನೆ ಬಾಡಿಗೆಗೆ ಪಡೆದು, ವಾಸವಾಗಿದ್ದರು. ಆನ್‌ಲೈನ್ ಮೂಲಕ ಬೈಕ್ ಬಾಡಿಗೆ ಪಡೆದು ನಗರದಲ್ಲಿ ಸುತ್ತಾಡುತಿದ್ದ ಆರೋಪಿಗಳು ಹೊಂಚು ಹಾಕಿ ದುಬಾರಿ ಬೈಕ್ ಕಳವು ಮಾಡಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತರಿಂದ 19 ಲಕ್ಷ ರೂ. ಮೌಲ್ಯದ 11 ಬೈಕ್‌ಗಳನ್ನು ಜಪ್ತಿ ಮಾಡಲಾಗಿದ್ದು, ಇವರ ಬಂಧನದಿಂದ ಎಚ್‌ಎಸ್‌ಆರ್ ಲೇಔಟ್, ಬಾಣಸವಾಡಿ, ಮಡಿವಾಳ, ಹಲಸೂರು ಸುತ್ತಲಿನ ಪ್ರದೇಶಗಳಲ್ಲಿ ನಡೆದಿದ್ದ ಬೈಕ್ ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News