ಹಂಪಿ ಇಟಲಿಯ ವ್ಯಾಟಿಕಲ್ ಸಿಟಿ ಇದ್ದಂತೆ: ಡಾ.ಚಿದಾನಂದಮೂರ್ತಿ

Update: 2019-06-23 14:35 GMT

ಬೆಂಗಳೂರು, ಜೂ.23: ಕಲೆಗಳ ನೆಲೆಬೀಡು ಹಂಪಿ ಇಟಲಿಯ ವ್ಯಾಟಿಕನ್ ಸಿಟಿ ಇದ್ದಂತೆ. ಇವರೆಡೂ ನಗರಗಳನ್ನು ಯಾವುದೇ ರಾಜರು ಆಳ್ವಿಕೆ ನಡೆಸಿರಲಿಲ್ಲವೆಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ತಿಳಿಸಿದರು.

ರವಿವಾರ ನಗರದ ದಿ ಮಿಥಿಕ್ ಸೊಸೈಟಿ ಸಂಸ್ಥೆ ಆಯೋಜಿಸಿದ್ದ ಹಂಪಿ-ವ್ಯಾಟಿಕನ್ ತೌಲನಿಕ ವಿಶ್ಲೇಷಣೆ ಕಾರ್ಯಕ್ರಮದ ಮಾತನಾಡಿದ ಅವರು, ಜನತೆ ಹಂಪಿಯ ವಿರೂಪಾಕ್ಷನನ್ನು ದೇವರೆಂದು ಭಾವಿಸದೆ, ನಮ್ಮನ್ನಾಳುವ ರಾಜನೆಂದು ತಿಳಿದಿದ್ದರು. ಅದೇ ಮಾದರಿಯಲ್ಲಿ ಇಟಿಲಿಯ ವ್ಯಾಟಿಕನ್ ನಗರದಲ್ಲಿ ಪೋಪ್‌ನನ್ನೇ ದೇವರೆಂದು ಪೂಜಿಸಲಾಗುತ್ತಿದೆ ಎಂದರು.

ಹಂಪಿಯ ಸುತ್ತಮುತ್ತ ಪ್ರದೇಶಗಳಲ್ಲಿ ಅನೇಕ ದೊರೆಗಳು ಆಳ್ವಿಕೆ ಮಾಡಿದ್ದಾರೆ. ಆದರೆ, ವಿರೂಪಾಕ್ಷನ ಆಸ್ಥಾನ ಹಂಪಿಯನ್ನು ಯಾರೂ ಆಕ್ರಮಣ ಮಾಡಿಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ಹಂಪಿಯ ಜನರು ಬೆಳೆದ ದವಸ-ಧಾನ್ಯಗಳಲ್ಲಿ ಕೃಷ್ಣನಿಗೆ ಪಾಲು ನೀಡುತ್ತಿದ್ದರು. ಇದನ್ನು ಭಕ್ತರಿಗೆ ಹಂಚಲಾಗುತ್ತಿತ್ತು ಎಂದು ಅವರು ಹೇಳಿದರು.

ದಿ ಮಿಥಿಕ್ ಸೊಸೈಟಿಯ ಕಾರ್ಯದರ್ಶಿ ವಿ.ನಾಗರಾಜ್ ಮಾತನಾಡಿ, ಪ್ರಾಚೀನ ಕಾಲದಿಂದಲೂ ಹಂಪಿ ಪವಿತ್ರ ಸ್ಥಳವಾಗಿದೆ. ಇಲ್ಲಿ ವಿರೂಪಾಕ್ಷನೆ ಆಳುವ ದೊರೆಯಾಗಿದ್ದ. ಇನ್ನು ಇಟಲಿಯ ವ್ಯಾಟಿಕನ್ ಸಿಟಿಯನ್ನು ಭಾವನಾತ್ಮಕವಾಗಿ ಹಂಪಿಗೆ ಹೋಲಿಕೆ ಮಾಡಿದ ಸಂಶೋಧಕ ಚಿದಾನಂದ ಮೂರ್ತಿಯನ್ನು ಅಭಿನಂದಿಸಿದರು.

ಈ ವೇಳೆ ಮಿಥಿಕ್ ಸೊಸೈಟಿಯ ಅಧ್ಯಕ್ಷ ಪ್ರೊ.ಕೃ.ನರಹರಿ, ಉಪಾಧ್ಯಕ್ಷ ಪ್ರೊ.ಕೋಟ್ರೆಶ್ ಪ್ರೊ.ಜಿ.ಎಸ್. ದೀಕ್ಷಿತ್ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News