ಪಾಸ್ಟಿಕ್ ಕೈಚೀಲ ಬಳಸದಂತೆ ಶಾಸಕಿ ಸೌಮ್ಯಾರೆಡ್ಡಿ ಕರೆ

Update: 2019-06-23 14:44 GMT

ಬೆಂಗಳೂರು, ಜೂ.23: ಪಾಸ್ಟಿಕ್ ಕವರ್‌ಗಳನ್ನು ಬಳಸದೇ, ಪರಿಸರ ರಕ್ಷಣೆಗೆ ಮುಂದಾಗಬೇಕೆಂದು ಶಾಸಕಿ ಸೌಮ್ಯಾರೆಡ್ಡಿ ಕರೆ ನೀಡಿದ್ದಾರೆ.

ಜಯನಗರದಲ್ಲಿ ನೂತನವಾಗಿ ನಿರ್ಮಿಸಿರುವ ವಿಶ್ವೇಶ್ವರಯ್ಯ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ವರ್ತಕರಿಗೆ ಮಾರಾಟ ಮಾಡಲು ಹಳೆ ಕಟ್ಟಡದಿಂದ ಹೊಸದಾಗಿ ನಿರ್ಮಾಣ ಮಾಡಿರುವ ಸಂಕಿರಣದಲ್ಲಿ ಹೂ, ತರಕಾರಿ. ಬಟ್ಟೆ ಅಂಗಡಿ ಸೇರಿದಂತೆ ಸುಮಾರು 150 ಹೊಸ ಮಳಿಗೆಗಳನ್ನು ವೀಕ್ಷಣೆ ಮಾಡುವ ಮೂಲಕ ಸಾಧಕ- ಬಾಧಕಗಳನ್ನು ಪರಿಶೀಲಿಸಿದರು. ಈಗಾಗಲೇ ಶೇ.80 ರಷ್ಟು ಮಳಿಗೆಗಳು ಹೊಸ ಕಟ್ಟಡಕ್ಕೆ ವರ್ಗವಾಗಿದ್ದು, ಇನ್ನು ಶೇ.20ರಷ್ಟು ಬಾಕಿ ಇದೆ ಎಂದು ಹೇಳಿದರು.

ನೂತನ ಮಳಿಗೆಗಳಲ್ಲಿ ಶಾಸಕಿ ಹಾಗೂ ಪಾಲಿಕೆ ಸದಸ್ಯರು ಶಾಪಿಂಗ್ ಮಾಡುವ ಮೂಲಕ ಹೊಸದಾಗಿ ಆರಂಭವಾಗಿರುವ ಮಳಿಗೆಗಳಲ್ಲಿ ಗ್ರಾಹಕರು ವಸ್ತುಗಳನ್ನು ಕೊಂಡುಕೊಳ್ಳಲು ಮನವಿ ಮಾಡಿಕೊಂಡರು. ಅಲ್ಲದೆ ವಿಶೇಷವಾಗಿ ರಿಯಾಯಿತಿ ದರದಲ್ಲಿ ವಸ್ತುಗಳು ಲಭ್ಯವಿದ್ದು, ಕೊಂಡುಕೊಳ್ಳುವಂತೆ ಗ್ರಾಹಕರಿಗೆ ಕರೆ ನೀಡಿದರು.

ಮಳಿಗೆಗಳಿಗೆ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ಶನಿವಾರ ಹಾಗೂ ರವಿವಾರದಂದು 5ರಿಂದ 8ಗಂಟೆಯವರೆಗೂ ಜಾನಪದ ಕಲಾ ತಂಡಗಳಿಂದ ಮನೋರಂಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಟ್ಟೆ ಬ್ಯಾಗ್ ಹಾಗೂ ಪೇಪರ್ ಬ್ಯಾಗ್‌ಗಳನ್ನು ಉಪಯೋಗಿಸಲು ಮನವಿ ಮಾಡಿದರು.

ಇದೇ ವೇಳೆ ಬೈರಸಂದ್ರ ವಾರ್ಡ್ ಪಾಲಿಕೆ ಸದಸ್ಯ ಎನ್.ನಾಗರಾಜ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News