ಕನ್ನಡ ಸಾಹಿತ್ಯ ಪರಂಪರೆ ಅತ್ಯಂತ ಉಜ್ವಲ: ವೈ.ಬಿ.ಎಚ್.ಜಯದೇವ್

Update: 2019-06-23 14:58 GMT

ಬೆಂಗಳೂರು, ಜೂ. 23: ಕನ್ನಡ ಸಾಹಿತ್ಯದ ಪರಂಪರೆ ಅತ್ಯಂತ ಉಜ್ವಲವಾದದ್ದು. ಹಾಗೆಯೆ ಅತ್ಯಂತ ಶ್ರೇಷ್ಟವೂ ಆದ ಸಾಹಿತ್ಯ ನಮ್ಮದು. ಈ ಎಲ್ಲವನ್ನೂ ಓದಿ ಅರಗಿಸಿಕೊಳ್ಳುವಂತಹ ಸಹೃದಯತೆ ನಮ್ಮದಾಗಬೇಕಾಗಿದೆ ಎಂದು ದಾಸರಹಳ್ಳಿ ಕ್ಷೇತ್ರದ ಕಸಾಪ ಅಧ್ಯಕ್ಷ ವೈ.ಬಿ.ಎಚ್.ಜಯದೇವ್ ಸಲಹೆ ಮಾಡಿದ್ದಾರೆ.

ರವಿವಾರ ಇಲ್ಲಿನ ಹಾವನೂರು ಬಡಾವಣೆಯ ವಾಸ್ಕ್ ಯೋಗ ಕೇಂದ್ರದಲ್ಲಿ ಕವಿ ಕೃಷ್ಣಪ್ರಸಾದ್ ರಚಿಸಿರುವ ‘ಗೀತೆಯ ಬೆಳಕು’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತ್ಯವನ್ನು ಓದಿ ಅಪ್ಪಿಕೊಳ್ಳಬೇಕಾದ ಔದಾರ್ಯತೆ ಬೆಳೆಸಿಕೊಳ್ಳಬೇಕು ಎಂದರು.

ಲೇಖಕ ಕೃಷ್ಣಪ್ರಸಾದ್ ಮಾತನಾಡಿ, ಗೀತೆಯ ಬೆಳಕು ಈ ಪುಸ್ತಕ ಇವತ್ತು ನಿಮ್ಮ ಕೈಸೇರಿದೆ ಅಂದರೆ ಅದಕ್ಕೆ ಪ್ರೇರಣೆ ಯೋಗಗುರು ಉಮಾಮಹೇಶ್ವರ್. ಫೇಸ್‌ಬುಕ್‌ನಲ್ಲಿ ಟೈಂಪಾಸ್‌ಗೆ ಬರೆಯುತ್ತಿದುದ್ದನ್ನು ಗಮನಿಸಿ ನನಗೆ ಧೈರ್ಯ ತುಂಬಿದ್ದಕ್ಕೆ ನಾನು ಪುಸ್ತಕ ಬರೆದಿದ್ದೇನೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News