ಮಾಲಕರು, ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಲು ಬಿಬಿಎಂಪಿಗೆ ಮನವಿ

Update: 2019-06-23 15:45 GMT

ಬೆಂಗಳೂರು, ಜೂ.23: ಕುರುಬರಹಳ್ಳಿ ವೃತ್ತದ ರಾಜ್‌ಕುಮಾರ್ ಪ್ರತಿಮೆ ಬಳಿ ಹೈ-ಟೆನ್ಷನ್ ವೈರ್ ಹಾದು ಹೋಗಿದ್ದರೂ ಅದೇ ಜಾಗದಲ್ಲಿ ಕಮರ್ಷಿಯಲ್ ಬಿಲ್ಡಿಂಗ್, ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಾಣ ಮಾಡುತ್ತಿದ್ದು, ಈ ಕೂಡಲೆ ಬಿಬಿಎಂಪಿಯು ಮಾಲಕ, ಗುತ್ತಿಗೆದಾರರ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್ ಹಿರಿಯ ವಕೀಲ ಎನ್.ಪಿ.ಅಮೃತೇಶ್ ಒತ್ತಾಯಿಸಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚಿಗೆ ಹೈ-ಟೆನ್ಷನ್ ವೈರ್ ತಗುಲಿ ಹಲವರು ಮೃತಪಟ್ಟಿದ್ದಾರೆ. ಇದರ ಬೆನ್ನಲ್ಲೇ ಕುರುಬರಹಳ್ಳಿ ವೃತ್ತದಲ್ಲಿ ಬಿಬಿಎಂಪಿಯಿಂದ ಬಿಲ್ಡಿಂಗ್ ಪ್ಲಾನಿಂಗ್‌ನ ಅನುಮತಿಯನ್ನು ಪಡೆಯದೇ ಬಿಲ್ಡಿಂಗ್ ನಿರ್ಮಾಣ ಮಾಡುತ್ತಿದ್ದಾರೆ. ಹೀಗಾಗಿ, ಬಿಬಿಎಂಪಿ ಮಾಲಕರ ಹಾಗೂ ಗುತ್ತಿಗೆದಾರರ ವಿರುದ್ಧ ನೋಟಿಸ್ ಜಾರಿಗೊಳಿಸಿ, ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದರು.

ಹೈ-ಟೆನ್ಷನ್ ವೈರ್ ಹಾದು ಹೋದ ಸ್ಥಳದಲ್ಲಿ ಬಿಲ್ಡಿಂಗ್‌ನ್ನು ನಿರ್ಮಾಣ ಮಾಡಬೇಕಾದರೆ, ಬಿಬಿಎಂಪಿ ಹಾಗೂ ವಿದ್ಯುತ್ ಸರಬರಾಜು ಇಲಾಖೆಯಿಂದ ಅನುಮತಿ ಪಡೆಯಬೇಕಾಗುತ್ತದೆ. ಮಾಲಕರು ಯಾವುದೇ ಅನುಮತಿಯನ್ನು ಪಡೆಯದೆ ಬಿಲ್ಡಿಂಗ್‌ನ್ನು ನಿರ್ಮಾಣ ಮಾಡಿದರೆ ಅವಘಡಗಳು ಸಂಭವಿಸುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News