ಎಸ್ಸಿ-ಎಸ್ಟಿ ನೌಕರರ ಭಡ್ತಿ ಮೀಸಲಾತಿ: ಮಾರ್ಗಸೂಚಿ ಸುತ್ತೋಲೆ ಪ್ರಕಟ

Update: 2019-06-24 16:41 GMT

ಬೆಂಗಳೂರು, ಜೂ. 24: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಟಿ-ಎಸ್ಟಿ) ನೌಕರರ ಭಡ್ತಿ ಮೀಸಲಾತಿ ಸಂಬಂಧ ರಾಜ್ಯ ಸರಕಾರದ 2017ರ ಅಧಿನಿಯಮ ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, ಈ ಬಗ್ಗೆ ಅನುಸರಿಸಬೇಕಾದ ಮಾರ್ಗಸೂಚಿ ಸುತ್ತೋಲೆಯನ್ನು ರಾಜ್ಯ ಸರಕಾರ ಹೊರಡಿಸಿದೆ.

ಭಡ್ತಿ ಮೀಸಲಾತಿ ಮತ್ತು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅಧಿಕಾರಿಗಳು ಮತ್ತು ನೌಕರರಲ್ಲಿನ ಪ್ರಶ್ನೆಗಳು ಮತ್ತು ಸಂಶಯಗಳಿಗೆ ಮೀಸಲಾತಿ ನಿಯಮಗಳ ಅನ್ವಯ ಉತ್ತರಿಸಲಾಗಿದೆ. 1978ರ ಎಪ್ರಿಲ್ 27ರ ಸರಕಾರಿ ಆದೇಶದ ಮುಂಭಡ್ತಿ ಮೀಸಲಾತಿ ನೀತಿ ಜಾರಿಗೊಳಿಸಲಾಗಿದೆ. ಈ ಆದೇಶದನ್ವಯ ಎಸ್ಸಿ-ಶೇ.15 ಮತ್ತು ಎಸ್ಸಿ-ಶೇ.3ರಷ್ಟು ಮೀಸಲಾತಿ ಕಲ್ಪಿಸಲಾಗಿದ್ದು, ಈ ಬದಲಾವಣೆಯಾಗಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಪವಿತ್ರ ಪ್ರಕರಣದಲ್ಲಿ 2019ರ ಮೇ 10ರಂದು ನೀಡಿದ ತೀರ್ಪಿನಲ್ಲಿ 2017ರ ಅಧಿನಿಯಮದ ಸಿಂಧುತ್ವವನ್ನು ಎತ್ತಿ ಹಿಡಿದಿರುವುದರಿಂದ 2017ರ ಫೆಬ್ರವರಿ 9ರಂದು ನೀಡಿರುವ ತೀರ್ಪಿನಲ್ಲಿ ಉಲ್ಲೇಖಿಸಿರುವ cash up principle applies ಎಂಬ ಅಂಶವು ಈಗ ಅನ್ವಯವಾಗುವುದಿಲ್ಲ. ತತ್ಪರಿಣಾಮ ಜೇಷ್ಠತೆಯನ್ನು ಅನುಸರಿಸಬೇಕಾಗುತ್ತಿದೆ ಎಂದು ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News