ಬಾರ್ಟಿ ನಂ.1 ಆಟಗಾರ್ತಿ

Update: 2019-06-24 18:41 GMT

  ಬರ್ಮಿಂಗ್‌ಹ್ಯಾಮ್, ಜೂ.24: ಜುಲಿಯಾ ಜಾರ್ಜರ್ಸ್‌ರನ್ನು ರವಿವಾರ 6-3,7-5 ನೇರ ಸೆಟ್‌ಗಳಿಂದ ಮಣಿಸಿದ ಅಶ್ಲೆಘ್ ಬಾರ್ಟಿ ಬರ್ಮಿಂಗ್‌ಹ್ಯಾಮ್ ಕ್ಲಾಸಿಕ್ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಆಸ್ಟ್ರೇಲಿಯದ ಆಟಗಾರ್ತಿ ಸೋಮವಾರ ಬಿಡುಗಡೆಯಾದ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ನಂ.1 ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ.

2017ರಲ್ಲಿ ಪೆಟ್ರಾ ಕ್ವಿಟೋವಾಗೆ ಫೈನಲ್‌ನಲ್ಲಿ ಸೋತಿದ್ದ 23ರ ಹರೆಯದ ಬಾರ್ಟಿ ಗ್ರಾಸ್-ಕೋರ್ಟ್ ಟೂರ್ನಮೆಂಟ್‌ನಲ್ಲಿ ವಾರವಿಡೀ ಒಂದೂ ಸೆಟನ್ನು ಕಳೆದುಕೊಂಡಿಲ್ಲ. ಜರ್ಮನಿ ಆಟಗಾರ್ತಿಯ ವಿರುದ್ಧ ಎರಡನೇ ಸೆಟ್‌ನಲ್ಲಿ 4-5 ಹಿನ್ನಡೆಯಿಂದ ಚೇತರಿಸಿಕೊಂಡು 1 ಗಂಟೆ, 28 ನಿಮಿಷಗಳ ಹೋರಾಟದಲ್ಲಿ ಜಯಶಾಲಿಯಾದರು. ಬಾರ್ಟಿ ನಂ.1 ರ್ಯಾಂಕಿಂಗ್‌ಗೆ ಏರಿದ ವಿಶ್ವದ 27ನೇ ಆಟಗಾತಿಯಾಗಿದ್ದಾರೆ. ಜು.1 ರಿಂದ ಆರಂಭವಾಗಲಿರುವ ವಿಂಬಲ್ಡನ್ ಚಾಂಪಿಯನ್‌ಶಿಪ್‌ಗೆ ಮೊದಲು ನಂ.1 ಸ್ಥಾನಕ್ಕೇರಿರುವ ಬಾರ್ಟಿಗೆ ಜಾರ್ಜಸ್ ಅಭಿನಂದಿಸಿದರು.

ದ್ವಿತೀಯ ಸ್ಥಾನದಲ್ಲಿದ್ದ ಫ್ರೆಂಚ್ ಓಪನ್ ಚಾಂಪಿಯನ್ ಬಾರ್ಟಿ ಜಪಾನ್‌ನ ನೊವೊಮಿ ಒಸಾಕಾರಿಂದ ಅಗ್ರ ಸ್ಥಾನ ವಶಪಡಿಸಿಕೊಂಡರು. ಒಸಾಕಾ ಗುರುವಾರ ನಡೆದಿದ್ದ ಟೂರ್ನಿಯ 2ನೇ ಸುತ್ತಿನಲ್ಲಿ ಯೂಲಿಯ ಪುಟಿಂಟ್‌ಸೇವಾಗೆ ಸೋತಿದ್ದರು.

1976ರ ಬಳಿಕ ಅಗ್ರಸ್ಥಾನಕ್ಕೇರಿರುವ ಆಸ್ಟ್ರೇಲಿಯದ ಎರಡನೇ ಆಟಗಾರ್ತಿ ಬಾರ್ಟಿ. ಎವೊನ್ ಗೂಲಾಗಾಂಗ್ ಕಾವ್ಲೇ 1976ರಲ್ಲಿ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News