ರಮೇಶ ಆಚಾರ್ಯ

Update: 2019-06-25 15:34 GMT

ಮೂಡುಬಿದಿರೆ, ಜೂ. 25: ಹವ್ಯಾಸಿ ಯಕ್ಷಗಾನ ಕಲಾವಿದ, ನುರಿತ ಕಮ್ಮಾರ ಸಚ್ಚೇರಿಪೇಟೆ ರಮೇಶ ಆಚಾರ್ಯ (78) ಮಂಗಳವಾರ ನಿಧನ ಹೊಂದಿದರು. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.

ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ವ್ಯಾಪ್ತಿಯ ಸಚ್ಚೇರಿಪೇಟೆ ಗ್ರಾಮಕೂಡುವಳಿಕೆ ಮೊಕ್ತೇಸರರಾಗಿ ಸುಮಾರು ಮೂರು ದಶಕಗಳಿಂದ ಸೇವೆ ಸಲ್ಲಿಸಿದ್ದ ಅವರು ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿಯಲ್ಲಿ ಕಲಾವಿದರಾಗಿದ್ದರು. ಕಮ್ಮಾರಿಕೆಯಲ್ಲಿ ವಿಶೇಷ ಹೆಸರುಗಳಿಸಿದ್ದ ಅವರ ವೃತ್ತಿ ಕೌಶಲ್ಯ ಹಾಗೂ ಸಮಾಜ ಸೇವೆಯನ್ನು ಗುರುತಿಸಿ ಮೂಡುಬಿದಿರೆ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನ, ಮುಂಡ್ಕೂರು ವಿಶ್ವಬ್ರಾಹ್ಮಣ ಯುವಸೇವಾ ಬಳಗ ಮತ್ತು ಮಹಿಳಾ ಬಳಗ , ಸಚ್ಚೇರಿಪೇಟೆಯ ಲಯನ್ಸ್ ಶಾಲೆ ಮೊದಲಾದೆಡೆ ಸಮ್ಮಾನಿಸಲಾಗಿತ್ತು. 

ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಪುರೋಹಿತ್ ಜಯಕರ ಆಚಾರ್ಯ ಹಾಗೂ ಆಡಳಿತ ಮಂಡಳಿ ಸದಸ್ಯರು ಮತ್ತು ದೇವಳದ ವಿವಿಧ ಸಂಘಟನೆಗಳ ಪ್ರಮುಖರು, ಊರಪರವೂರ ಗಣ್ಯರು ರಮೇಶ ಆಚಾರ್ಯ ಅಂತಿಮ ದರ್ಶನಗೈದು ಸಂತಾಪ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ