ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಕರ್ತವ್ಯ: ಚಿತ್ರ ನಿರ್ದೇಶಕ ನಂಜುಂಡೇಗೌಡ

Update: 2019-06-25 17:09 GMT

ಬೆಂಗಳೂರು, ಜೂ.25: ಪರಿಸರ ಸ್ವಚ್ಛತೆ ಪ್ರತಿಯೊಬ್ಬರ ಹೊಣೆಯಾಗಿದ್ದು, ಸ್ವಚ್ಛ ಪರಿಸರದಿಂದ ಉತ್ತಮ ಬದುಕು ಸಾಧ್ಯ ಎಂದು ಚಿತ್ರನಿರ್ದೇಶಕ ನಂಜುಂಡೇಗೌಡ ಅಭಿಪ್ರಾಯಪಟ್ಟರು.

ಮಂಗಳವಾರ ನಗರದ ರಾಜೀವ್ ಗಾಂಧಿ ಎದೆ ರೋಗ ಸಂಸ್ಥೆ ಆವರಣದಲ್ಲಿ ಹಮ್ಮಿಕೊಂಡಿದ್ದ, ಸ್ವಚ್ಛತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪರಿಸರ ಸ್ವಚ್ಛತೆ ಕಾರ್ಯ ಸರಕಾರ, ಸಂಘ ಸಂಸ್ಥೆಗಳು ಅಥವಾ ನೆರೆ ಹೊರೆಯವರು ಮಾಡಲಿ ಎಂಬ ಧೋರಣೆ ಸರಿಯಲ್ಲ. ಸ್ವಚ್ಛತೆ ನಮ್ಮ ಆದ್ಯ ಕಾರ್ಯವಾಗಬೇಕು ಎಂದರು. ರಂಗಕರ್ಮಿ ಆಡುಗೋಡಿ ಶ್ರೀನಿವಾಸ್ ಮಾತನಾಡಿ, ಪರಿಸರದ ನೆಲ, ಜಲ ಇತ್ಯಾದಿಗಳನ್ನೆಲ್ಲ ಸ್ವಚ್ಛತೆಯಿಂದ ಉಳಿಸಿಕೊಳ್ಳುವುದು ಸಹ ಬದುಕಿನ ಒಂದು ಕಲೆ ಎಂದು ನುಡಿದರು.

ಸ್ವಚ್ಛತೆ ಕುರಿತು ಹಲವು ಮಾಧ್ಯಮಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಜೊತೆಗೆ, ಬಿಬಿಎಂಪಿ ವತಿಯಿಂದ ಕಸ ವಿಗಂಡನೆ ಬಗ್ಗೆಯೂ ಹೇಳಲಾಗುತ್ತಿದ್ದು, ಇದನ್ನು ಎಲ್ಲರೂ ಪಾಲಿಸಿದರೆ, ನಗರ ವ್ಯಾಪ್ತಿಯಲ್ಲಿ ಕಸದ ರಾಶಿ ಕಾಣುವುದಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಪೋಷಕ ಸಿನಿಮಾ ಕಲಾವಿದರಾದ ಡಿಂಗ್ರಿ ನಾಗರಾಜು, ಗಣೇಶ್‌ರಾವ್, ನವನಿತಾ, ಉಮೇಶ್ ಸೇರಿಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News