ವಿವಿಗಳು ನೆಲಮೂಲ ಸಂಸ್ಕೃತಿಯನ್ನು ಸಂಶೋಧಿಸಲಿ: ಜಾನಪದ ತಜ್ಞ ಬಾನಂದೂರು ಕೆಂಪಯ್ಯ

Update: 2019-06-25 18:02 GMT

ಬೆಂಗಳೂರು, ಜೂ.25: ಯವಜನತೆ ನಮ್ಮ ನೆಲದ ಜಾನಪದ ಪರಂಪರೆಯಲ್ಲಿ ಹುದುಗಿರುವ ಜ್ಞಾನವನ್ನು ಅನ್ವೇಷಿಸುವ ಕೆಲಸವನ್ನು ಮಾಡಬೇಕಿದೆ ಎಂದು ಜಾನಪದ ತಜ್ಞ ಬಾನಂದೂರು ಕೆಂಪಯ್ಯ ಆಶಿಸಿದರು.

ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅವರು, ವಿಶ್ವವಿದ್ಯಾಲಯಗಳು ನೆಲಮೂಲ ಸಂಸ್ಕೃತಿ ಕುರಿತಾದ ಶೋಧನೆಗೆ ಮಹತ್ವ ನೀಡಬೇಕು ಎಂದರು.

ಕುಲಪತಿಗಳಾದ ಪ್ರೊ.ಜಾಫೆಟ್ ಮಾತನಾಡಿ, ಯುವಜನತೆ ಸಮಯ ಪ್ರಜ್ಞೆಯನ್ನು ಮುಖ್ಯವಾಗಿ ಬೆಳೆಸಿಕೊಳ್ಳಬೇಕು. ಓದಿನ ಜೊತೆ ಜೊತೆಗೆ ಪಠ್ಯತೇರ ಚಟುವಟಿಕೆಗಳನ್ನು ಬದುಕಿನ ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು ಸಲಹೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಕುಲಸಚಿವ ಪ್ರೊ.ರಾಮಚಂದ್ರೆಗೌಡ, ಇಂದು ಕಲೆ ಎಂಬುದು ಕೇವಲ ಮನೋರಂಜನೆಗಾಗಿ ಅಲ್ಲ. ಬದಲಾಗಿ ಜ್ಞಾನದ ಭಾಗವಾಗಿ ನೋಡುವ ದೃಷ್ಟಿಕೋನ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಆಗ ಮಾತ್ರವೇ ಸಮಾಜದ ಬದಲಾವಣೆ ಸಾಧ್ಯ ಎಂದರು

ಮುಂದಿನ ದಿನಗಳಲ್ಲಿ ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಎಲ್ಲಾ ವಿದ್ಯಾರ್ಥಿ ಮತ್ತು ಪೋಷಕರನ್ನು ಸೇರಿಸಿ ಬೃಹತ್ ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸುವ ಯೋಜನೆ ವಿಶ್ವವಿದ್ಯಾಲಯಕ್ಕೆ ಇದೆ ಎಂಬ ಅಭಿಪ್ರಾಯವನ್ನು ವಾಣಿಜ್ಯ ಶಾಸ್ತ್ರ ವಿಭಾಗದ ಡೀನ್ ಪ್ರೊ.ಮುನಿರಾಜು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಅಂತರ-ವಿಭಾಗ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News