ರೇಬಿಸ್ ಲಸಿಕೆ ಕೊರತೆ: ಹೊರ ರಾಜ್ಯಗಳಿಂದ ಖರೀದಿಗೆ ಮುಂದಾದ ಆರೋಗ್ಯ ಇಲಾಖೆ

Update: 2019-06-26 16:27 GMT

ಬೆಂಗಳೂರು, ಜೂ.26: ರಾಜ್ಯದಲ್ಲಿನ ಆಂಟಿರೇಬಿಸ್ ಚುಚ್ಚುಮದ್ದು ಕೊರತೆ ನೀಗಿಸುವ ಉದ್ದೇಶದಿಂದ ಹೊರ ರಾಜ್ಯಗಳಿಂದ ರೇಬಿಸ್ ಮದ್ದು ಖರೀದಿಸಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಂದಾಗಿದೆ.

ರಾಜ್ಯಾದ್ಯಂತ ಬಹುತೇಕ ಸರಕಾರಿ ಆಸ್ಪತ್ರೆಗಳಲ್ಲಿ ಆಂಟಿರೇಬಿಸ್ ಲಸಿಕೆ ಕೊರತೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯಗಳಿಗೆ ಪತ್ರ ಬರೆಯಲಾಗಿದೆ. ಲಭ್ಯವಿರುವ ಆಂಟಿರೇಬಿಸ್ ಮತ್ತು ಇಮಿನೊಗ್ಲೋಬಲಿನ್ ಔಷಧಗಳನ್ನು ನೀಡುವಂತೆ ಮನವಿ ಮಾಡಲಾಗಿದೆ ಎಂದು ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಹೇಳಿದ್ದಾರೆ.

ಇಲಾಖೆಯ ಪತ್ರಕ್ಕೆ ಸ್ಪಂದಿಸಿರುವ ಕೇರಳ ರಾಜ್ಯ ಸರಕಾರ ಔಷಧ ಸರಬರಾಜು ಸಂಸ್ಥೆ 10 ಸಾವಿರ ರೇಬಿಸ್ ಹಾಗೂ ಎರಡು ಸಾವಿರ ಇಮಿನೊಗ್ಲೋಬಲಿನ್ ಔಷಧಗಳನ್ನು ನೀಡಲು ಸಮ್ಮತಿಸಿದೆ. ತಮಿಳುನಾಡು ಅಧಿಕಾರಿಗಳೊಂದಿಗೆ ಈ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News