ಕೆಎಸ್ಸಾರ್ಟಿಸಿ: ಹೈಸ್ಪೀಡ್ ಡೀಸೆಲ್ ಖರೀದಿಗೆ ಭಾರತ್ ಪೆಟ್ರೋಲಿಯಂನೊಂದಿಗೆ ಒಪ್ಪಂದ

Update: 2019-06-26 16:46 GMT

ಬೆಂಗಳೂರು, ಜೂ.26: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳು (ನಾಲ್ಕು ಸಂಸ್ಥೆಗಳು) ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ.ಅವರಿಂದ ಹೈಸ್ಪೀಡ್ ಡೀಸೆಲ್ ಖರೀದಿಸುವ ಒಂದು ವರ್ಷದ ಒಡಂಬಡಿಕೆ ಮಾಡಿಕೊಂಡಿವೆ.

ಕೆಎಸ್ಸಾರ್ಟಿಸಿ ಮತ್ತು ಸಹೋದರ ಸಂಸ್ಥೆಗಳಾದ ವಾಯವ್ಯ ಸಾರಿಗೆ ಸಂಸ್ಥೆ, ಈಶಾನ್ಯ ಸಾರಿಗೆ ಸಂಸ್ಥೆ ಹಾಗೂ ಬೆಂಗಳೂರು ಸಾರಿಗೆ ಸಂಸ್ಥೆಗಳು ಜೂ.25ರಂದು ಭಾರತ ಸರಕಾರದ ಸ್ವಾಮ್ಯದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿ. ಅವರೊಂದಿಗೆ ಒಂದು ವರ್ಷದ ಅವಧಿಗೆ ಉತ್ತಮ ಗುಣಮಟ್ಟದ ಡೀಸೆಲ್ ಪೂರೈಕೆ, ಇಂಧನ ದಾಸ್ತಾನು ಸೌಕರ್ಯಗಳ ಮತ್ತು ಸ್ವಯಂಚಾಲಿತ ನಿರ್ವಹಣಾ ವ್ಯವಸ್ಥೆ, ಉನ್ನತೀಕರಿಸಿದ ಡಿಜಿಟಲ್ ಲಾಕರ್ ವ್ಯವಸ್ಥೆಯನ್ನು ಒಳಗೊಂಡ ಒಡಂಬಡಿಕೆಯನ್ನು ನವೀಕರಿಸಿಕೊಂಡಿರುತ್ತವೆ.

ಈ ವೇಳೆ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಅರಬೈಲ್ ಶಿವರಾಮ್ ಹೆಬ್ಬಾರ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News