ವಿವಿಯನ್ ರಿಚರ್ಡ್ಸ್ ದಾಖಲೆ ಹಿಂದಿಕ್ಕಿದ ಬಾಬರ್ ಆಝಂ

Update: 2019-06-27 06:20 GMT

ಬರ್ಮಿಂಗ್‌ಹ್ಯಾಮ್, ಜೂ.26: ಪಾಕಿಸ್ತಾನ ದಾಂಡಿಗ ಬಾಬರ್ ಆಝಂ ಏಕದಿನ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ವೇಗದಲ್ಲಿ 3,000 ರನ್ ಪೂರೈಸಿದ ಸಾಧನೆ ಮಾಡಿದರು. ಬುಧವಾರ ನ್ಯೂಝಿಲ್ಯಾಂಡ್ ವಿರುದ್ಧ ನಡೆದ ವಿಶ್ವಕಪ್ ಪಂದ್ಯದ ವೇಳೆ ಈ ಮೈಲುಗಲ್ಲು ತಲುಪಿದರು.

 24ರ ಹರೆಯದ ಬಾಬರ್ ತನ್ನ 68ನೇ ಇನಿಂಗ್ಸ್‌ನಲ್ಲಿ 3 ಸಾವಿರ ರನ್ ಪೂರೈಸಿದರು. ಈ ವೇಳೆ ಅವರು ವೆಸ್ಟ್ ಇಂಡೀಸ್‌ ಕ್ರಿಕೆಟ್ ದಂತಕತೆ ವಿವಿ ರಿಚರ್ಡ್ಸ್(69 ಇನಿಂಗ್ಸ್)ದಾಖಲೆಯನ್ನು ಹಿಂದಿಕ್ಕಿದರು. ದಕ್ಷಿಣ ಆಫ್ರಿಕದ ಹಾಶಿಮ್ ಅಮ್ಲ(57 ಇನಿಂಗ್ಸ್)ಅತ್ಯಂತ ವೇಗವಾಗಿ 3,000 ರನ್ ಪೂರೈಸಿದ ಸಾಧನೆ ಮಾಡಿದ್ದಾರೆ.

ಆಝಂ 127 ಎಸೆತಗಳಲ್ಲಿ 11 ಬೌಂಡರಿಗಳ ನೆರವಿನಿಂದ ವಿಶ್ವಕಪ್‌ನಲ್ಲಿ ಚೊಚ್ಚಲ ಶತಕ ಪೂರೈಸಿದರು. ಇದು ಅವರ ವೃತ್ತಿಬದುಕಿನ 10ನೇ ಶತಕವಾಗಿದೆ. ಬಾಬರ್ ಸಾಹಸದಿಂದ ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಅಜೇಯವಾಗುಳಿದಿದ್ದ ನ್ಯೂಝಿಲ್ಯಾಂಡ್‌ನ್ನು 6 ವಿಕೆಟ್‌ಗಳಿಂದ ಮಣಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News