ರಾಮಾಯಣ, ಮಹಾಭಾರತ ಹಲವು ಕಟ್ಟುಕತೆಗಳಿಂದ ಕೂಡಿವೆ: ಎಸ್.ಎಲ್.ಭೈರಪ್ಪ

Update: 2019-06-27 05:56 GMT

ಬೆಂಗಳೂರು, ಜೂ.27: ಭಾರತದ ಎರಡು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತ ಹಲವು ಕಟ್ಟುಕತೆಗಳಿಂದ ಕೂಡಿವೆ ಎಂದು ಸಾಹಿತಿ ಎಸ್.ಎಲ್.ಭೈರಪ್ಪ ಹೇಳಿದ್ದಾರೆ.

ಭಾರತೀಯ ವಿದ್ಯಾಭವನ ಹಾಗೂ ಇಸ್ಕಾನ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಮಹಾಭಾರತ ಸಂದೇಶ’ ಕುರಿತ ಐದು ದಿನಗಳ ರಾಷ್ಟ್ರೀಯ ಸಮ್ಮೇಳನಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಸಮಯ ಮತ್ತು ಸ್ಥಳಗಳನ್ನು ಆಧಾರವಾಗಿಟ್ಟು ನೋಡಿದರೆ ಇವೆರಡು ಮಹಾಕಾವ್ಯಗಳು ಹಲವು ಕಟ್ಟುಕತೆಗಳನ್ನು ಒಳಗೊಂಡಿದೆ. ಆದರೆ, ಅವು ಗಹನವಾದ ಅರ್ಥವನ್ನೂ ಹೊಂದಿವೆ ಎಂದವರು ಪ್ರತಿಪಾದಿಸಿದರು.

ಇದೇ ವಿಚಾರವಾಗಿ ಮುಂದುವರಿದು ಮಾತನಾಡಿದ ಭೈರಪ್ಪ ಅವರು, 31 ವರ್ಷ ವಯಸ್ಸಿನ ಯುವಕ ಭೀಮ ಮತ್ತು 80ರ ಹರೆಯದ ಜರಾಸಂಧನ ನಡುವೆ ಮೂರು ದಿನಗಳು ಮಲ್ಲಯುದ್ಧ ನಡೆಯಲು ಸಾಧ್ಯವೇ? ವಿರಾಟ ನಗರ ಗುಡ್ಡಗಾಡು ಪ್ರದೇಶ. ಈ ಪ್ರದೇಶದಲ್ಲಿ ರಥಗಳಲ್ಲಿ ತೆರಳಿ ಯುದ್ಧ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಅದೇರೀತಿ 85 ವರ್ಷ ದಾಟಿದ ವ್ಯಾಸರು ವಿಪರೀತ ಚಳಿಯ ವಾತಾವರಣವಿರುವ ಬದರಿನಾಥದಲ್ಲಿ ಕುಳಿತು ಮಹಾಭಾರತ ಬರೆದರೆ ಎಂಬ ಪ್ರಶ್ನೆಗಳು ಏಳುವುದು ಸಹಜ. ಈ ಕಟ್ಟುಕತೆಗಳ ಹೊರತಾಗಿಯೂ ನಮ್ಮ ಸಂಸ್ಕೃತಿಯ ಮೂಲವನ್ನು ನಾವು ಇಲ್ಲಿಂದಲೇ ಕಟ್ಟಿಕೊಂಡಿದ್ದೇವೆ ಎಂದು ಅವರು  ಅಭಿಪ್ರಾಯಿಸಿದರು.

ಕಟ್ಟುಕತೆಗಳಲ್ಲಿ ಗಹನವಾದ ಅರ್ಥವಿರುತ್ತವೆ.. ನೈಜತೆಗೆ ಕಟ್ಟುಬಿದ್ದರೆ ಮೌಲ್ಯಗಳನ್ನು ಪ್ರತಿಪಾದಿಸುವಾಗ ಅಷ್ಟೊಂದು ಆಳಕ್ಕೆ ಇಳಿಯಲು ಆಗುವುದಿಲ್ಲ ಎಂದವರು ಅಭಿಪ್ರಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News