ಐಡಿಬಿಐ ಬ್ಯಾಂಕ್‌ನಿಂದ ಸಾಲ ಪಡೆದ ಪ್ರಕರಣ: ಋಣಮುಕ್ತ ಪತ್ರ ಕೋರಿ ಯುಎಸ್‌ಎಸ್ ಸಲ್ಲಿಸಿದ್ದ ಅರ್ಜಿ ಇತ್ಯರ್ಥ
ಬೆಂಗಳೂರು, ಜೂ.27: ಸಾಲವನ್ನು ತೀರಿಸಿದ ಹಿನ್ನೆಲೆಯಲ್ಲಿ ಐಡಿಬಿಐ ಬ್ಯಾಂಕ್‌ನಿಂದ ಋಣಮುಕ್ತ ಪತ್ರ ನೀಡಲು ನಿರ್ದೇಶಿಸಬೇಕೆಂದು ಕೋರಿ ಯುನೈಟೆಡ್ ಸ್ಪಿರಿಟ್ ಲಿಮಿಟೆಡ್(ಯುಎಸ್‌ಎಲ್) ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇತ್ಯರ್ಥಪಡಿಸಿದೆ. ಅಲ್ಲದೆ, ಕೆಳ ನ್ಯಾಯಾಲಯಕ್ಕೆ ಹೋಗುವುದು ಸೇರಿದಂತೆ ಮುಂದಿನ ತೀರ್ಮಾನ ಅರ್ಜಿದಾರರಿಗೆ ಬಿಟ್ಟ ವಿಚಾರವೆಂು ಹೈಕೋರ್ಟ್ ಆದೇಶದಲ್ಲಿ ತಿಳಿಸಿದೆ.
ಸಾಲ ತೀರಿಸಿದ್ದರೂ ನಮಗೆ ಇನ್ನೂ ಋಣಮುಕ್ತ ಪತ್ರ ನೀಡಿಲ್ಲ ಎಂದು ಆಕ್ಷೇಪಿಸಿ ಐಡಿಬಿಐ ಬ್ಯಾಂಕ್ ವಿರುದ್ಧ ಯುಎಸ್‌ಎಲ್ ಕಂಪೆನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಅಲೋಕ್ ಆರಾಧೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ಕಾಯ್ದಿರಿಸಿತ್ತು. ಗುರುವಾರ ಅರ್ಜಿಯನು್ನ ಇತ್ಯರ್ಥಪಡಿಸಿ ಆದೇಶ ಹೊರಡಿಸಿದೆ.
ವಿಜಯ ಮಲ್ಯ ಯುಎಸ್‌ಎಲ್ ಕಂಪೆನಿಗೆ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಸಾಲ ಪಡೆಯಲಾಗಿತ್ತು ಮತ್ತು ಅದನ್ನು ಈಗಾಗಲೇ ತೀರಿಸಲಾಗಿದೆ. ಆದರೆ, ಮಲ್ಯ ಕಿಂಗ್ ಫಿಷರ್ ಕಂಪೆನಿಯಲ್ಲಿ ಸಾಲ ಪಡೆದಿದ್ದಾರೆ. ಅವರು ಅಧ್ಯಕ್ಷರಾಗಿದ್ದ ಕಾರಣಕ್ಕೆ ಸಾಲ ನೀಡಲಾಗಿತ್ತು ಎಂಬ ಬ್ಯಾಂಕ್ ವಾದ ಸಮರ್ಥನೀಯವಲ್ಲ ಮತ್ತು ಈ ಕಾರಣಕ್ಕಾಗಿಯೇ ಇನ್ನೂ ಋಣಮುಕ್ತ ಪತ್ರ ನೀಡುತ್ತಿಲ್ಲ ಎಂದು ಅರ್ಜಿಾರರ ಪರ ವಕೀಲರು ವಾದಿಸಿದ್ದರು.
ಸಾಲ ನೀಡುವಾಗ ಮಲ್ಯ ಯುಎಸ್‌ಎಲ್ ಕಂಪೆನಿಯ ಅಧ್ಯಕ್ಷರಾಗಿದ್ದರು ಎಂಬ ಕಾರಣಕ್ಕಾಗಿಯೇ ಸಾಲ ನೀಡಲಾಗಿತ್ತು. ಈಗ ಅವರು ಆ ಸ್ಥಾನದಲ್ಲಿ ಇಲ್ಲ ಎಂದಾಕ್ಷಣ ಅಂದಿನ ಪ್ರಕರಣದಿಂದ ಬಚಾವಾಗಲು ಸಾಧ್ಯವಿಲ್ಲ. ಶೇರು ಮಾರುಕಟ್ಟೆಯಲ್ಲಿ ಬ್ಯಾಂಡ್ ವ್ಯಾಲ್ಯೂ ನೋಡಿಯೇ ಸಾಲ ನೀಡಲಾಗಿತ್ತು ಎಂದು ಐಡಿಬಿಐ ಬ್ಯಾಂಕ್ ಪರ ವಕೀಲರು ವಾದ ಮಂಡಿಸಿದ್ದರು. ವಕೀಲರ ವಾದ ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾಯಪೀಠವು ಅರ್ಜಿಯನ್ನು ಇತ್ಯರ್ಥಪಡಿಸಿ, ಆದೇಶ ಹೊರಡಿಸಿದೆ.