ವೃದ್ಧ ದಂಪತಿಗೆ ಹಲ್ಲೆ ನಡೆಸಿ ಸುಲಿಗೆ: ಆರೋಪಿ ಬಂಧನ
Update: 2019-06-28 21:16 IST
ಬೆಂಗಳೂರು, ಜೂ.28: ವೃದ್ಧ ದಂಪತಿಯ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಪ್ರಕರಣ ಸಂಬಂಧ ವ್ಯಕ್ತಿಯೊಬ್ಬನನ್ನು ಇಲ್ಲಿನ ಅತ್ತಿಬೆಲೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಮೂಲದ ಶ್ರೀನಿವಾಸನ್(32) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಜೂ.21 ರಂದು ನಗರದ ಗೋಲ್ಡನ್ ಗೇಟ್ ಬಡಾವಣೆಯ ಮುನಿರೆಡ್ಡಿ ಮತ್ತು ಜಯಮ್ಮ ವೃದ್ಧ ದಂಪತಿಯ ಮನೆಗೆ ನುಗ್ಗಿದ ಆರೋಪಿ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ನಗದು ಚಿನ್ನಾಭರಣ ದೋಚಿ ಪರಾರಿಯಾಗಿದ್ದನು. ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ತಮಿಳುನಾಡಿನಲ್ಲಿ ಕೊಲೆಯೊಂದನ್ನು ಮಾಡಿರುವ ಕೃತ್ಯ ಹಾಗೂ ಮುನಿರೆಡ್ಡಿ ದಂಪತಿ ಮನೆಯಲ್ಲಿ ಇಬ್ಬರು ಇರುವುದನ್ನು ಗಮನಿಸಿ ಹೊಂಚು ಹಾಕಿ ಹಲ್ಲೆ ನಡೆಸಿ ಕಳವು ಮಾಡಿರುವುದನ್ನು ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.