ಸಂಚಾರ ನಿಯಮ ಉಲ್ಲಂಘನೆ: 23 ಸಾವಿರ ಪ್ರಕರಣ ದಾಖಲು

Update: 2019-06-28 17:07 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.28: ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಪ್ರಸಕ್ತ ವರ್ಷದಲ್ಲಿ 23 ಸಾವಿರ ಪ್ರಕರಣ ದಾಖಲಿಸಿ 69.46 ಲಕ್ಷ ರೂ.ದಂಡ ಸಂಗ್ರಹಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್(ಸಂಚಾರ) ಪಿ. ಹರಿಶೇಖರನ್ ತಿಳಿಸಿದರು.

2017 ರಲ್ಲಿ ಸಂಚಾರ ನಿಯಮ ಉಲ್ಲಂಘನೆ ಹಾಗೂ ವೇಗದ ಚಾಲನೆ ಮಾಡಿದವರನ್ನು ಪರಿಶೀಲಿಸಿ 3 ಕೋಟಿ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. 2018ರಲ್ಲಿ 83 ಸಾವಿರ ಪ್ರಕರಣ ದಾಖಲಿಸಿ 25 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದರು.

ಮೊಬೈಲ್‌ನಲ್ಲಿ ಮಾತನಾಡುತ್ತ ವಾಹನ ಚಲಾಯಿಸುವವರ ಮೇಲೆ ಪ್ರಕರಣ ದಾಖಲಿಸಲಾಗುತ್ತಿದ್ದು, 2019ರಲ್ಲಿ 48 ಸಾವಿರ ಪ್ರಕರಣ ದಾಖಲಾಗಿದೆ. 16 ಕೋಟಿ ರೂಪಾಯಿ ದಂಡ ಸಂಗ್ರಹಿಸಲಾಗಿದೆ ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News