ನಿಯಮ ಉಲ್ಲಂಘನೆ: 389 ಆಟೊ ರಿಕ್ಷಾ ಜಪ್ತಿ
ಬೆಂಗಳೂರು, ಜೂ.28: ರಸ್ತೆ ನಿಯಮ ಉಲ್ಲಂಘನೆ ಹಾಗೂ ಪ್ರಯಾಣಿಕರ ದೂರು ಆರೋಪ ಪ್ರಕರಣ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿರುವ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು 389 ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ.
ಉಪ್ಪಾರಪೇಟೆ, ಚಿಕ್ಕಪೇಟೆ, ಮಾಗಡಿ ರಸ್ತೆ, ಕೆಂಗೇರಿ, ಮಲ್ಲೇಶ್ವರಂ ಸೇರಿದಂತೆ ಪಶ್ಚಿಮ ವಿಭಾಗದ 18 ಪೊಲೀಸ್ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಶುಕ್ರವಾರ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.
ರಾಜಾಜಿನಗರದಲ್ಲಿ 239 ಅತಿ ಹೆಚ್ಚು ಪ್ರಕರಣಗಳನ್ನು ದಾಖಲಿಸಿದ್ದರೆ, ಸಿಟಿ ಮಾರುಕಟ್ಟೆಯಲ್ಲಿ 200, ಕಾಮಾಕ್ಷಿಪಾಳ್ಯದಲ್ಲಿ 194, ವಿವಿಪುರಂನಲ್ಲಿ 181, ಮಾಗಡಿ ರಸ್ತೆಯಲ್ಲಿ 142, ಜಾಲಹಳ್ಳಿ 134, ಕುಮಾರಸ್ವಾಮಿ ಲೇಔಟ್‌ನಲ್ಲಿ 120 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮಾಕ್ಷಿಪಾಳ್ಯದಲ್ಲಿ ಆಟೋಗಳಲ್ಲಿ ಮಿಟರ್ ಸರಿಯಾಗಿ ಪ್ರದರ್ಶಿಸದ 40, ಬ್ಯಾಟರಾಯನಪುರದಲ್ಲಿ 30, ಕೆಂಗೇರಿಯಲ್ಲಿ 23 ಸೇರಿ 364 ಪ್ರಕರಣಗಳನ್ನು ದಾಖಲಿಸಲಾಗಿದೆ. ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 389 ಆಟೊಗಳಿಗೆ ದಂಡ ವಿಧಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ.