ಸಂಸದ ಪ್ರಜ್ವಲ್ ರೇವಣ್ಣ ಪ್ರಮಾಣ ಪತ್ರದ ಪೂರಕ ದಾಖಲೆ ಒದಗಿಸಿ: ಹೈಕೋರ್ಟ್ ಆದೇಶ

Update: 2019-06-28 17:25 GMT

ಬೆಂಗಳೂರು, ಜೂ.28: ಹಾಸನ ಲೋಕಸಭಾ ಕ್ಷೇತ್ರದ ಪ್ರಜ್ವಲ್ ರೇವಣ್ಣ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಅರ್ಜಿದಾರರಿಗೆ ಪ್ರಜ್ವಲ್ ನಾಮಪತ್ರಕ್ಕೆ ಸಂಬಂಧಿಸಿದ ಪ್ರಮಾಣಪತ್ರ ಹಾಗೂ ಪೂರಕ ದಾಖಲಾತಿಗಳನ್ನು ಒದಗಿಸಲು ಹಾಸನ ಜಿಲ್ಲಾಧಿಕಾರಿಗೆ ಸೂಚನೆ ನೀಡಿದೆ.

ಈ ಕುರಿತು ವಕೀಲ ಜಿ.ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ವಿಚಾರಣೆ ನ್ಯಾಯಮೂರ್ತಿ ಅಲೋಕ ಆರಾಧೆ ಅವರಿದ್ದ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು, ಅರ್ಜಿದಾರರಾದ ಜಿ.ದೇವರಾಜೇಗೌಡ ಅವರು ಹಾಸನ ಜಿಲ್ಲಾಧಿಕಾರಿಗೆ ಪ್ರಜ್ವಲ್ ಅವರ ನಾಮಪತ್ರದ ದಾಖಲಾತಿಗಳನ್ನು ನೀಡಬೇಕೆಂದು ಮನವಿ ಮಾಡಿದರೆ ನೀಡುತ್ತಿಲ್ಲ. ಇದರಿಂದ, ಕೋರ್ಟ್‌ಗೆ ಎಲ್ಲ ದಾಖಲಾತಿಗಳನ್ನು ನೀಡಲು ತೊಂದರೆಯಾಗುತ್ತಿದೆ ಎಂದು ಪೀಠಕ್ಕೆ ತಿಳಿಸಿದರು.

ವಕೀಲರ ವಾದ ಆಲಿಸಿದ ನ್ಯಾಯಪೀಠವು ಹಾಸನ ಡಿಸಿಗೆ ಜು.3ರೊಳಗೆ ಪ್ರಮಾಣಪತ್ರ ಹಾಗೂ ಪೂರಕ ದಾಖಲಾತಿಗಳನ್ನು ಒದಗಿಸಲು ಸೂಚಿಸಿ, ವಿಚಾರಣೆಯನ್ನು ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News