ಟೀಮ್ ಇಂಡಿಯಾಕ್ಕೆ ಕೇಸರಿ ಜೆರ್ಸಿ

Update: 2019-06-28 18:42 GMT

ಹೊಸದಿಲ್ಲಿ, ಜೂ.28: ವಿಶ್ವಕಪ್ ಟೂರ್ನಮೆಂಟ್‌ನ ರವಿವಾರ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರರು ಹೊಸ ಜೆರ್ಸಿ ಧರಿಸಿ ಕಣಕ್ಕಿಳಿಯಲಿದ್ದಾರೆ. ಯಾವಾಗಲೂ ಬ್ಲೂ ಜೆರ್ಸಿಯಲ್ಲಿ ಮಿಂಚುತ್ತಿದ್ದ ಟೀಮ್ ಇಂಡಿಯಾದ ಆಟಗಾರರು ಮೊದಲ ಬಾರಿ ಕೇಸರಿ ಬಣ್ಣದ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಟೀಮ್ ಇಂಡಿಯಾದ ಹೊಸ ಜೆರ್ಸಿ ಅನಾವರಣಗೊಂಡಿದೆ.

ಇದೀಗ ಇಂಗ್ಲೆಂಡ್ ತಂಡದ ಆಟಗಾರರು ಧರಿಸುವ ಜರ್ಸಿ ಟೀಮ್ ಇಂಡಿಯಾ ಸದಸ್ಯರ ಜರ್ಸಿಯನ್ನು ಹೋಲುತ್ತಿದ್ದು, ಈ ಕಾರಣದಿಂದಾಗಿ ಉಭಯ ತಂಡದ ಆಟಗಾರರು ಒಂದೇ ಬಣ್ಣದ ಜೆರ್ಸಿ ಧರಿಸಿ ಕಣಕ್ಕಿಳಿಯುವಂತಿಲ್ಲ. ಇಂಗ್ಲೆಂಡ್‌ನ ಆಟಗಾರರು ತನ್ನ ಈಗಿನ ಜೆರ್ಸಿಯಲ್ಲೇ ಕಣಕ್ಕಿಳಿಯುತ್ತಾರೆ. ಈ ಕಾರಣದಿಂದಾಗಿ ಭಾರತ ನೀಲಿ ಬಣ್ಣದ ಬದಲು ಕಿತ್ತಲೆ ಹಾಗೂ ನೀಲಿ ಮಿಶ್ರಿತ ಜೆರ್ಸಿಯನ್ನು ಆಯ್ಕೆ ಮಾಡಿದೆ.

ಟೀಮ್ ಇಂಡಿಯಾದ ಆಟಗಾರರು ಕೇಸರಿ ಬಣ್ಣ ಆಯ್ಕೆ ಮಾಡಿರುವುದಕ್ಕೆ ಕಾಂಗ್ರೆಸ್ ಟೀಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News