28 ದಿನದ ಮಗುವನ್ನು ಕೊಂದು ತಿಂದ ಬೀದಿ ನಾಯಿಗಳು !

Update: 2019-06-29 08:49 GMT

ಮೀರತ್ : ಸಹರಣಪುರ್ ಜಿಲ್ಲೆಯಲ್ಲಿ ಮೂರು ತಿಂಗಳ ಮಗುವಿನ ಮೇಲೆ ದಾಳಿಗೈದ ಬೀದಿ ನಾಯಿಗಳು ಕೊಂದ ಎರಡೇ ದಿನಗಳಲ್ಲಿ ಅದೇ ಜಿಲ್ಲೆಯ ದಯಾಳ್ಪುರ್ ಎಂಬ ಗ್ರಾಮದ ಹೊರವಲಯದ ಗದ್ದೆಯಲ್ಲಿ 28 ದಿನ ಪ್ರಾಯದ ಹಸುಳೆಯನ್ನು ಬೀದಿ ನಾಯಿಗಳು ಕೊಂದಿವೆ.

''ಶುಕ್ರವಾರ ಮುಂಜಾನೆಯ ಹೊತ್ತಿಗೆ ನಾಯಿಗಳು ಮಗುವನ್ನು ಎಳೆದೊಯ್ದಿರಬೇಕು. ಮಗು ಕಾಣದೇ ಇದ್ದಾಗ ಎಲ್ಲೆಡೆ ಹುಡುಕಲು ಆರಂಭಿಸಿದೆವು ಕೊನೆಗೆ ಗ್ರಾಮದ ಹೊರವಲಯದ ಗದ್ದೆಯಲ್ಲಿ ಬಹಳಷ್ಟು ಗಾಯಗಳನ್ನು ಹೊಂದಿದ ಮಗುವಿನ ಕಳೇಬರ ಪತ್ತೆಯಾಗಿತ್ತು,'' ಎಂದು ಮಗುವಿನ ತಂದೆ ರಾಮ್ ಕರಣ್ ವಿವರಿಸಿದ್ದಾರೆ.

ಬುಧವಾರವಷ್ಟೇ ಗ್ರಾಮದ ಮೂರು ತಿಂಗಳ ಮಗುವನ್ನು ಬೀದಿ ನಾಯಿಗಳ ಗುಂಪೊಂದು ಕೊಂದಿತ್ತು. ಸಹರಣಪುರ್ ಜಿಲ್ಲೆಯ ಬೆಹತ್ ಪ್ರದೇಶದ ಮನೆಯ ಹಜಾರದಲ್ಲಿ ತಾಯಿ ಜತೆ ಮಲಗಿದ್ದ ಮಗುವನ್ನು ನಾಯಿಗಳು ಮುಂಜಾನೆ 4 ಗಂಟೆ ಸುಮಾರಿಗೆ ಎಳೆದೊಯ್ದಿದ್ದವು. ತಾಯಿಗೆ ಕೂಡಲೇ ಎಚ್ಚರವಾಗಿ ಬೊಬ್ಬೆ ಹಾಕಿದಾಗ ಸ್ಥಳೀಯರು ಸೇರಿ ಮಗುವಿಗೆ ಹುಡುಕಾಡಿದರೂ ಬೆಳಿಗ್ಗೆಯಷ್ಟೇ ಹತ್ತಿರದ ಗದ್ದೆಯಲ್ಲಿ ಮಗುವಿನ ಮೃತದೇಹ ಕಂಡು ಬಂದಿತ್ತು.

ಬೀದಿ ನಾಯಿಗಳ ಹಾವಳಿಯ ಹಿನ್ನೆಲೆಯಲ್ಲಿ ಪೊಲೀಸ್ ತಂಡವೊಂದು ಆರಣ್ಯ ಇಲಾಖೆಯ ತಂಡದ ಜತೆ ಗಸ್ತಿನಲ್ಲಿ ನಿರತವಾಗಿದ್ದರೂ ಇನ್ನೊಂದು ಘಟನೆ ನಡೆದಿರುವುದು ಜನರನ್ನು ಬೆಚ್ಚಿ ಬೀಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News