ವಿಧಾನಸಭೆ ಜಂಟಿ ಕಾರ್ಯದರ್ಶಿ ಕುಮಾರಸ್ವಾಮಿಗೆ ಬೀಳ್ಕೊಡುಗೆ
Update: 2019-06-29 22:57 IST
ಬೆಂಗಳೂರು, ಜೂ.29: ಮೂವತ್ತಾರು ವರ್ಷಗಳಿಗೂ ಹೆಚ್ಚು ಕಾಲ ಸುದೀರ್ಘ ಸೇವೆ ಸಲ್ಲಿಸುವ ಮೂಲಕ ಸಹೋದ್ಯೋಗಿ, ಅಧಿಕಾರಿ ಮತ್ತು ಸಿಬ್ಬಂದಿಯ ಪ್ರೀತಿ, ವಿಶ್ವಾಸದ ಜೊತೆಗೆ ಜನಪ್ರತಿನಿಧಿಗಳ ಮನ್ನಣೆಯನ್ನೂ ಗಳಿಸಿದ ರಾಜ್ಯ ವಿಧಾನ ಸಭೆಯ ಜಂಟಿ ಕಾರ್ಯದರ್ಶಿ ಎಂ.ಎಸ್.ಕುಮಾರಸ್ವಾಮಿ ಶನಿವಾರ ವಯೋ ನಿವೃತ್ತಿ ಹೊಂದಿದ್ದಾರೆ.
ಈ ವೇಳೆಯಲ್ಲಿ ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಮ್ಮ ಕಚೇರಿಯಲ್ಲಿ ಫಲ-ತಾಂಬೂಲ ನೀಡಿ ಎಂ.ಎಸ್.ಕುಮಾರಸ್ವಾಮಿ ಅವರನ್ನು ಆತ್ಮೀಯವಾಗಿ ಬೀಳ್ಕೊಟ್ಟರು.