×
Ad

ಜು.14ಕ್ಕೆ ಬೆಸ್ಟ್ ಕಾರ್ಪೊರೇಟರ್ ಪ್ರಶಸ್ತಿ ಪ್ರದಾನ

Update: 2019-06-29 23:10 IST

ಬೆಂಗಳೂರು, ಜೂ.29: ಜನರ ಸಮಸ್ಯೆಗಳಿಗೆ ಸ್ಪಂದಿಸಿ ವಾರ್ಡ್‌ಗಳ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತಿರುವ ಕಾರ್ಪೊರೇಟರ್‌ಗಳನ್ನು ಗುರುತಿಸಿ ಜು.14ರಂದು ಟೌನ್‌ಹಾಲ್‌ನಲ್ಲಿ ಬೆಸ್ಟ್ ಕಾರ್ಪೊರೇಟರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಿಟಿಜನ್ಸ್ ಫಾರ್ ಬೆಂಗಳೂರಿನ ಸಹ ಸಂಸ್ಥಾಪಕ ಶ್ರೀನಿವಾಸ್ ಅಲವಲ್ಲಿ, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಹಲವು ಬಾರಿ ಮೇಯರ್ ಮತ್ತು ಆಯುಕ್ತರ ಜೊತೆ ಸಿಟಿಜನ್ ಫಾರ್ ಬೆಂಗಳೂರು ಸದಸ್ಯರು ತಿಂಗಳ ಪ್ರತಿ ಶನಿವಾರ ಎಲ್ಲ ವಾರ್ಡ್‌ಗಳಿಗೆ ಭೇಟಿ ನೀಡಿ ಕಾರ್ಪೊರೇಟರ್‌ಗಳ ಕಾರ್ಯವೈಖರಿಯ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಿದರು.

ಬಿಬಿಎಂಬಿಯ ಪ್ರತಿ ವಾರ್ಡ್‌ನಲ್ಲಿ ಮೂಲಭೂತ ಸೌಕರ್ಯಗಳ ಬಗ್ಗೆ ಕಾರ್ಪೊರೇಟರ್‌ಗಳು ಮಾಡಿರುವ ಕೆಲಸ, ಮಂಜೂರಾದ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಹಾಗೂ ಕಾರ್ಯ ವೈಖರಿಯ ಬಗ್ಗೆ ಸಮಿತಿಯ ಸದಸ್ಯರು ನೀಡಿರುವ ವರದಿಯ ಆಧಾರ ಮೇಲೆ ಅರ್ಹತೆಯುಳ್ಳ ಕಾರ್ಪೊರೇಟರ್‌ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ಜನಸಾಮಾನ್ಯರ ಕಷ್ಟಗಳ ಬಗ್ಗೆ ಸಮಗ್ರವಾಗಿ ಸ್ವಂದಿಸುವ ವರದಿಯನ್ನು ನಮ್ಮ ಸಮಿತಿ ನೀಡಿದ್ದು, ಈ ವರದಿಯ ಆಧಾರದ ಮೇಲೆ ಜನಸಾಮಾನ್ಯರಿಂದ ಮೆಚ್ಚುಗೆ ಇರುವ ಕಾಪೋರೇಟರ್‌ಗಳಿಗೆ ಬೆಸ್ಟ್ ಕಾರ್ಪೊರೇಟರ್ ಪ್ರಶಸ್ತಿ ನೀಡಲಾಗುವುದು. ಅಲ್ಲದೆ, ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News