ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡವರಿಗೆ ಕೆಎಸ್ಸಾರ್ಟಿಸಿ ವಿಶೇಷ ವೇತನ

Update: 2019-06-29 17:50 GMT

ಬೆಂಗಳೂರು, ಜೂ.29: ಎರಡು ಮಕ್ಕಳಿದ್ದರೆ ಸಾಕು ಎನ್ನುವ ಸರಕಾರದ ಯೋಜನೆಗೆ ಕೆಎಸ್ಸಾರ್ಟಿಸಿ ಕೈ ಜೋಡಿಸಿದ್ದು, ತಮ್ಮ ನೌಕರರಲ್ಲಿ ಎರಡು ಮಕ್ಕಳಿರುವವರಿಗೆ ವಿಶೇಷ ವೇತನ ನೀಡಲು ಮುಂದಾಗಿದೆ.

ಸರಕಾರದಿಂದ ಕುಟುಂಬ ಯೋಜನೆಗೆ ಕೆಎಸ್ಸಾರ್ಟಿಸಿ ಹೊಸ ನಿಯಮವನ್ನು ಜಾರಿ ಮಾಡಿದ್ದು, ಎರಡು ಮಕ್ಕಳಿರುವ ಸಿಬ್ಬಂದಿಗೆ ವಿಶೇಷ ವೇತನ ನೀಡಲು ಮುಂದಾಗಿದೆ. ಈ ಸೌಲಭ್ಯವನ್ನು ಪಡೆದುಕೊಳ್ಳಲು ನೌಕರರು ಹಾಗೂ ಅವರ ಪತ್ನಿ ಸಂತಾನಹರಣ ಚಿಕಿತ್ಸೆ ಮಾಡಿಸಿಕೊಂಡ ದೃಢೀಕರಣ ಪತ್ರ ನೀಡುವುದನ್ನು ಕಡ್ಡಾಯ ಮಾಡಲಾಗಿದೆ.

ಕೆಎಸ್ಸಾರ್ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಸುತ್ತೋಲೆಯನ್ನು ಹೊರಡಿಸಿದ್ದು, ಸಂಸ್ಥೆಯ ಎಲ್ಲ ಸಿಬ್ಬಂದಿಗೂ ಹಾಗೂ ತರಬೇತಿ ನೌಕರರಿಗೂ ಈ ನಿಯಮ ಅನ್ವಯವಾಗಲಿದ್ದು, ವಾರ್ಷಿಕ ವೇತನ ಭಡ್ತಿಯನ್ನು ವೈಯಕ್ತಿಕ ವೇತನವನ್ನಾಗಿ ಪೂರ್ಣ ಸೇವಾವಧಿಗೆ ಪಡೆಯಲು ಅರ್ಹರಿರುತ್ತಾರೆ. ವೈದ್ಯರಿಂದ ದೃಢೀಕರಿಸಿದ ದಾಖಲೆ ನೀಡಿದರೆ ಪೂರ್ಣ ಸೇವಾವಧಿಗೆ ನೀಡಲು ಆದೇಶಿಸಲಾಗಿದೆ. ಅರ್ಜಿಯಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ದೃಢೀಕರಣ ಪತ್ರ ಇಲ್ಲವಾದಲ್ಲಿ ಈ ವಿಶೇಷ ವೇತನ ಭಡ್ತಿಗೆ ಅರ್ಹರಾಗುವುದಿಲ್ಲದೆಂದು ಹೇಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News