ಎನ್‌ಆರ್‌ಸಿ: ಗಡು ಜುಲೈ 31ಕ್ಕೆ ಮಂದೂಡಿಕೆ

Update: 2019-06-29 18:37 GMT

 ಹೊಸದಿಲ್ಲಿ, ಜೂ. 29: ಅಸ್ಸಾಂನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪೌರತ್ವ ನೋಂದಣಿ ಪ್ರಕ್ರಿಯೆಯನ್ನು ಜುಲೈ 31ರ ವರೆಗೆ ಒಂದು ತಿಂಗಳ ಕಾಲ ವಿಸ್ತರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ.

ಪ್ರಸಕ್ತ ಗಡುವಿನ ಒಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಭಾರತದ ಪ್ರಧಾನ ನೋಂದಣಾಧಿಕಾರಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಈ ವಾರದ ಆರಂಭದಲ್ಲಿ ಬಿಡುಗಡೆ ಮಾಡಿದ ಕರಡಿನಲ್ಲಿ 1 ಲಕ್ಷ ಜನರ ಹೆಸರನ್ನು ಕೈಬಿಡಲಾಗಿದೆ. ಬುಧವಾರ ಬಿಡುಗಡೆಗೊಂಡ ಎನ್‌ಆರ್‌ಸಿ ಕರಡಿನಲ್ಲಿ 1.02 ಲಕ್ಷ ಹೆಚ್ಚುವರಿ ಜನರ ಹೆಸರನ್ನು ಕೈಬಿಡಲಾಗಿದ್ದು, ಈ ಹೆಸರುಗಳು ಕಳೆದ ವರ್ಷ ಜುಲೈಯಲ್ಲಿ ಬಿಡುಗಡೆ ಮಾಡಲಾಗಿದ್ದ ಎನ್‌ಆರ್‌ಸಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದವು. ಆದರೆ, ಈ ಹೆಸರುಗಳು ಪಟ್ಟಿಯಲ್ಲಿ ಸೇರಲು ಅನರ್ಹ ಎಂದು ಸಾಬೀತಾದ ಹಿನ್ನೆಲೆಯಲ್ಲಿ ಅವುಗಳನ್ನು ಕೈಬಿಡಲಾಯಿತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News