ಕೊಹ್ಲಿ ಪಡೆಗೆ ಸೆಮಿಗೇರಲು ಇನ್ನೊಂದೇ ಮೆಟ್ಟಿಲು

Update: 2019-06-29 18:38 GMT

ಬರ್ಮಿಂಗ್‌ಹ್ಯಾಮ್, ಜೂ.29: ಕೂಟದಲ್ಲಿ ಒಂದು ಪಂದ್ಯದಲ್ಲೂ ಸೋಲದೆ ಅಜೇಯವಾಗಿ ಉಳಿದಿರುವ ಟೀಮ್ ಇಂಡಿಯಾ ರವಿವಾರ ನಡೆಯಲಿರುವ ವಿಶ್ವಕಪ್‌ನ 38ನೇ ಪಂದ್ಯದಲ್ಲಿ ಇಂಗ್ಲೆಂಡ್‌ನ್ನು ಎದುರಿಸಲಿದೆ.

ಆಡಿರುವ ಆರು ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಜಯಿಸಿರುವ ಟೀಮ್ ಇಂಡಿಯಾ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ನ್ಯೂಝಿಲ್ಯಾಂಡ್ ವಿರುದ್ಧದ ಪಂದ್ಯ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು. ಇಂಗ್ಲೆಂಡ್ ಆಡಿರುವ 7 ಪಂದ್ಯಗಳ ಪೈಕಿ 4ರಲ್ಲಿ ಜಯಿಸಿ 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಐಸಿಸಿ ನಂ.1 ತಂಡವಾಗಿರುವ ಆತಿಥೇಯ ಇಂಗ್ಲೆಂಡ್ ನಾಕೌಟ್ ಹಂತ ಪ್ರವೇಶಿಸಲು ಉಳಿದ ಎಲ್ಲ ಪಂದ್ಯಗಳಲ್ಲೂ ಜಯಿಸಬೇಕಾಗಿದೆ. ಆರಂಭದಲ್ಲಿ ಫೇವರಿಟ್ ತಂಡವಾಗಿದ್ದಇಂಗ್ಲೆಂಡ್ ಇದೀಗ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಭಾರತದ ಎದುರು ಸೋಲು ಅನುಭವಿಸಿದರೆ ಸೆಮಿಫೈನಲ್ ಹಾದಿ ಕಠಿಣವಾಗಲಿದೆ.

ನಾಯಕ ಇಯಾನ್ ಮೊರ್ಗನ್, ಜೋಸ್ ಬಟ್ಲರ್, ಜೋನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಜೋಫ್ರಾ ಆರ್ಚರ್ ಅವರನ್ನೊಳಗೊಂಡ ತಂಡ ಕೂಟದಿಂದ ಹೊರಬೀಳುವ ಆತಂಕ ಎದುರಿಸುತ್ತಿದೆ.

ದ್ವಿಪಕ್ಷೀಯ ಸರಣಿಯಲ್ಲಿ ಭಾರತದ ವಿರುದ್ಧ ಇಂಗ್ಲೆಂಡ್ ತವರಿನಲ್ಲಿ 2-1 ಅಂತರದಲ್ಲಿ ಜಯ ಗಳಿಸಿತ್ತು. ಆದರೆ ಗಾಯಗೊಂಡಿದ್ದ ಜಸ್‌ಪ್ರೀತ್ ಬುಮ್ರಾ ಪಾಲ್ಗೊಂಡಿರಲಿಲ್ಲ. ವೇಗಿ ಮುಹಮ್ಮದ್ ಶಮಿ ಅಪೂರ್ವ ಫಾರ್ಮ್‌ನಲ್ಲಿದ್ದಾರೆ. ಅವರು ಎರಡು ಪಂದ್ಯಗಳಲ್ಲಿ 8 ವಿಕೆಟ್‌ಗಳನ್ನು ಉಡಾಯಿಸಿದ್ದಾರೆ. ಕಳೆದ ಪಂದ್ಯದಲ್ಲಿ ಶಮಿ ದಾಳಿಗೆ ಸಿಲುಕಿದ ವೆಸ್ಟ್ ಇಂಡೀಸ್ ಬೇಗನೇ ಆಲೌಟಾಗಿತ್ತು.

ಭಾರತದ ಆಟಗಾರರು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೇಸರಿ ಬಣ್ಣದ ಜೆರ್ಸಿಯೊಂದಿಗೆ ಕಣಕ್ಕಿಳಿಯಲಿದ್ದಾ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News