ಉತ್ತರಪ್ರದೇಶ ಕಾಂಗ್ರೆಸ್ ಸಮಿತಿಗೆ 35 ಪದಾಧಿಕಾರಿಗಳು ರಾಜೀನಾಮೆ

Update: 2019-06-29 18:39 GMT

ಲಕ್ನೋ, ಜೂ. 29: ಲೋಕಸಭಾ ಚುನಾವಣೆಯ ವಿಫಲತೆಯ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿರುವುದು ಕಾಂಗ್ರೆಸ್‌ನಲ್ಲಿ ಮುಂದುವರಿದಿದ್ದು, ಉತ್ತರಪ್ರದೇಶ ಕಾಂಗ್ರೆಸ್ ಸಮಿತಿಯ 35ಕ್ಕೂ ಅಧಿಕ ಪದಾಧಿಕಾರಿಗಳು ಶನಿವಾರ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಪಕ್ಷದ ರಾಜ್ಯ ಘಟಕದ ಹಿರಿಯ ಉಪಾಧ್ಯಕ್ಷ ರಂಜಿತ್ ಸಿಂಗ್ ಜಾಧವ್, ಪ್ರಧಾನ ಕಾರ್ಯದರ್ಶಿ ಆರಾಧನಾ ಮಿಶ್ರ ಮೋನಾ, ಉಪಾಧ್ಯಕ್ಷ ಆರ್.ಪಿ. ತ್ರಿಪಾಠಿ ಹಾಗೂ ಇತರರು ರಾಜೀನಾಮೆ ನೀಡಿದ್ದಾರೆ ಎಂದು ಪಕ್ಷ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆ ತಿಳಿಸಿದೆ.

ಪಕ್ಷದ ಸ್ಥಾನಗಳಿಗೆ ರಾಜೀನಾಮೆ ನೀಡಿದ ಇತರರಲ್ಲಿ ಮಾಧ್ಯಮ ಸಂಯೋಜಕ ರಾಜೀವ್ ಬಕ್ಷಿ, ಜಂಟಿ ಮಾದ್ಯಮ ಸಂಯೋಜಕ ಪಿಯೂಷ್ ಮಿಶ್ರಾ, ಓಂಕಾರ್ ನಾಥ್ ಸಿಂಗ್, ಅಮರ್‌ನಾಥ್ ಅಗರ್ವಾಲ್, ಮುಖೇಶ್ ಸಿಂಗ್ ಚೌಹಾನ್, ಪ್ರಿಯಾಂಕಾ ಗುಪ್ತಾ ಹಾಗೂ ಅಶೋಕ್ ಸಿಂಗ್ ಸೇರಿದ್ದಾರೆ.

ಉತ್ತರಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಸುಮಾರು 100 ಸದಸ್ಯರಿದ್ದಾರೆ. ಪಕ್ಷದ ಹುದ್ದೆಗೆ ರಾಜೀನಾಮೆ ನೀಡುವವರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News